ಆಚಾರವಿಲ್ಲದ ನಾಲಿಗೆ
ರಚನೆಕಾರ: ಪುರಂದರದಾಸರು
ವರ್ಗ: ವಿಷ್ಣು
ಆಚಾರವಿಲ್ಲದ ನಾಲಿಗೆ ನಿನ್ನ
ನೀಚ ಬುದ್ಧಿಯ ಬಿಡು ನಾಲಿಗೆ || ಪ ||
ವಿಚಾರವಿಲ್ಲದೆ ಪರರದೂಷಿಪುದಕ್ಕೆ
ಚಾಚಿಕೊಂಡಿರುವಂಥ ನಾಲಿಗೆ || ಅ.ಪ ||
ಪ್ರಾತಃಕಾಲ್ದೊಳೆದ್ದು ನಾಲಿಗೆ
ಸಿರಿ ಪತಿಯೆನನ ಬಾರದೆ ನಾಲಿಗೆ
ಪತಿತ ಪ್ರವನ ನಮ್ಮ ರಜಪತಿ ಜನಕನ
ಸತತವು ನುಡಿಕಂಡ್ಯ ನಾಲಿಗೆ || ೧ ||
ಚಾಡಿ ಹೇಳಲಿ ಬೇಡ್ ನಾಲಿಗೆ
ನಿನನ ಬೇಡಿಕೊಂಬುವೆನು ನಾಲಿಗೆ
ರೂಢಿಗೊಡೆಯಶ್ರೀ ರಾಮನ ನಾಮವ
ಪ್ರಡುತಲಿರು ಕಂಡ್ಯ ನಾಲಿಗೆ || ೨ ||
ಹರಿಯ ಸ್ಮರಣೆಮಾಡು ನಾಲಿಗೆ
ನರಹರಿಯ ಭಜಿಸು ಕಂಡ್ಯ ನಾಲಿಗೆ
ವರದ ಪುರಂದರ ವಿಠಲರಾಯನ
ಚರಣ ಕಮಲ ನೆನೆ ನಾಲಿಗೆ || ೩ ||
ನೀಚ ಬುದ್ಧಿಯ ಬಿಡು ನಾಲಿಗೆ || ಪ ||
ವಿಚಾರವಿಲ್ಲದೆ ಪರರದೂಷಿಪುದಕ್ಕೆ
ಚಾಚಿಕೊಂಡಿರುವಂಥ ನಾಲಿಗೆ || ಅ.ಪ ||
ಪ್ರಾತಃಕಾಲ್ದೊಳೆದ್ದು ನಾಲಿಗೆ
ಸಿರಿ ಪತಿಯೆನನ ಬಾರದೆ ನಾಲಿಗೆ
ಪತಿತ ಪ್ರವನ ನಮ್ಮ ರಜಪತಿ ಜನಕನ
ಸತತವು ನುಡಿಕಂಡ್ಯ ನಾಲಿಗೆ || ೧ ||
ಚಾಡಿ ಹೇಳಲಿ ಬೇಡ್ ನಾಲಿಗೆ
ನಿನನ ಬೇಡಿಕೊಂಬುವೆನು ನಾಲಿಗೆ
ರೂಢಿಗೊಡೆಯಶ್ರೀ ರಾಮನ ನಾಮವ
ಪ್ರಡುತಲಿರು ಕಂಡ್ಯ ನಾಲಿಗೆ || ೨ ||
ಹರಿಯ ಸ್ಮರಣೆಮಾಡು ನಾಲಿಗೆ
ನರಹರಿಯ ಭಜಿಸು ಕಂಡ್ಯ ನಾಲಿಗೆ
ವರದ ಪುರಂದರ ವಿಠಲರಾಯನ
ಚರಣ ಕಮಲ ನೆನೆ ನಾಲಿಗೆ || ೩ ||