ಆಡಹೋಗೋಣ ಬಾರೋ ರಂಗ

ರಚನೆಕಾರ: ಪುರಂದರದಾಸರು

ವರ್ಗ: ಶ್ರೀಕೃಷ್ಣ

ಆಡಹೋಗೋಣ ಬಾರೋ ರಂಗ
ಓಡಿಹೋಗಲು ಬೇಡೋ ಕೃಷ್ಣ || ಪ ||

ಅಣ್ಣಣ ಕಲ್ಲು ಗೋಲಿ ಗಜುಗ
ಚಿಣ್ಣಣ ಕೋಲು ಚೆಂಡು ಬುಗುರಿ
ಕಣ್ಣಣ ಮುಚ್ಚಾಲೆ ಹಲವುಕೂಟ
ಬಣ್ಣದ ಆಟಗಳನೆಲ್ಲ || ೧ ||

ಸೋಲು ಗೆಲುವಿಗೆಲು ನೋನು
ಬಾಲಕರಳು ಕೂಡಿಕೊಂಡು
ಮೇಲೆ ಮಮತೆಯೆಂದ ಸಾನು-
ಕೂಲವಾಗಿ ನಡೆಸುವಂತೆ || ೨ ||

ಪುಟ್ಟ ಪುಟ್ಟ ಕಳಲು ಕಂಬಳಿ
ಕಟ್ಟಟ್ಟ ಬುತ್ತಿ ಕೈಯಲಿ ಕೋಲು
ದಿಟ್ಟ ಚಲುವನಾದ ಪುರಂದರ
ವಿಠಲ ಗೋವಳರ ರಾಯ || ೩ ||