ಅಲ್ಲಿ ರಾಘವೇಂದ್ರ

ರಚನೆಕಾರ: ಅಜ್ಞಾತ

ಗಾಯನ: ಶ್ರೀನಿಧಿ ರಾವ್

ವರ್ಗ: ರಾಘವೇಂದ್ರ ಸ್ವಾಮಿ

ಅಲ್ಲಿ ರಾಘವೇಂದ್ರ ಇಲ್ಲಿ ರಾಘವೇಂದ್ರ
ಗುರುರಾಯ ಗುರುರಾಯ || ಪ ||

ತುಂಗಾನದಿ ತೀರಮಂತ್ರಾಲಯ ಊರ || ಅ.ಪ ||

ಯೋಗಿಗಳ ರಾಜ ರಾಜ ಹೇ ಮಹಾರಾಜ |
ಜ್ಞಾನದ ಕಣಜ ದಿವ್ಯ ತೇಜ || ೧ ||

ಭಕ್ತರಿಗೆ ಸ್ವರ್ಗ ಸ್ವರ್ಗ ಮುಕ್ತಿಯ ಮಾರ್ಗ |
ರಾಘವೇಂದ್ರ ಗುರುಗಳ ಚರಣ ಸುಯೋಗ || ೨ ||