ಆನಂದ ಆನಂದ ಮತ್ತೆ ಪರಮಾನಂದ
ರಚನೆಕಾರ: ವಿಜಯ ದಾಸರು
ಗಾಯನ: ಯು ಶಾಂತ
ವರ್ಗ: ವಿಷ್ಣು
ಆನಂದ ಆನಂದ ಮತ್ತೆ ಪರಮಾನಂದ || ಪ ||
ಆನಂದನ ಕಂದ ಒಲಿಯೆ ಏನಂದದೆ ವೇದವೃಂದಾ || ಅ.ಪ ||
ಆ ಮೊದಲು ಕ್ಷ ಕಾರಾಂತ ಈ ಮಹಾ ವರ್ಣಗಳೆಲ್ಲ |
ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವಗೆ || ೧ ||
ಜಲ ಕಾಷ್ಠ ಶೈಲ ಗಗನ ನೆಲ ಪವಕ ವಾಯು ತರು |
ಫಲ ಪುಷ್ಪ ಬಳ್ಳಿಗಳೊಳಗೆ ಹರಿ ವ್ಯಾಪ್ತನೆಂದರಿತವಗೆ || ೨ ||
ತಾರೋ ಬಾರೋ ಬೀರೊ ಸಾರೊ ಮಾರೊ ಹಾರೊ ಹೋರೊ ಹೀರೊ |
ಸೇರೋ ಯಾರೋ ತೋರೊ ಎಂಬುದು ಹರಿಯ ಪ್ರೇರಣೆ ಎಂದರಿತವಗೆ || ೩ ||
ಪೋಪುದು ಬರುತಿಪ್ಪುದು ಮತ್ತೆ ಕೋಪ ಶಾಂತ ಮಾಡುವುದು |
ರೂಪು ಲಾವಣ್ಯ ಹರಿಯ ವ್ಯಾಪಾರ ಎಂದರಿತವಗೆ || ೪ ||
ಮಧ್ವಶಾಸ್ತ್ರ ಪ್ರವಚನ ಮುದ್ದುಕೃಷ್ಣನ ದರುಶನ |
ಶುದ್ಧ ವಿಜಯವಿಠಲನ್ನ ಪೊಂದಿ ಕೊಂಡಾಡುವವಗೆ || ೫ ||