ಆನೆ ಬಂದಿತಮ್ಮ
ರಚನೆಕಾರ: ಪುರಂದರದಾಸರು
ಗಾಯನ: ವಿದ್ಯಾ ದೇಶಪಾಂಡೆ
ವರ್ಗ: ಶ್ರೀಕೃಷ್ಣ
ಆನೆ ಬಂದಿತಮ್ಮ
ಮರಿಯಾನೆ ಬಂದಿತಮ್ಮ || ಪ ||
ತೊಲಗಿರೆ ತೊಲಗಿರೆ ಪರಬ್ರಹ್ಮ
ಬಲು ಸರಪಳಿ ಕಡಕೊಂಡು ಬಂತಮ್ಮ || ಅ.ಪ ||
ಕಪಟನಾಟಕದ ಮರಿಯಾನೆ |
ನಿಕಟ ಸಭೆಯೊಳು ನಿಂತಾನೆ ||
ಶಕಟನ ಭಂಡಿಯ ಮುರಿದಾನೇ |
ಕಪಟನಾಟಕದಿಂದ ಸೋದರ ಮಾವನ
ಅಕಟಕಟೆನಿಸಿ ಕೊಂದಾನೆ || ೧ ||
ಕೀಳು ಭುವನವ ಉಂಡಾನೆ |
ಸ್ವಾಮಿ ಬಾಲಕನೆಂಬೋ ಚೆಲುವಾನೆ ||
ಚೆಲುವ ಕಾಳಿಂಗನ ಹೆಡೆಯಲಾಡುತ
ಮದಸೊಕ್ಕಿ ಬರುತಾನೆ || ೨ ||
ಭೀಮಾರ್ಜುನರನು ಗೆಲಿಸ್ಯಾನೆ |
ಪರಮಭಾಗವತರ ಪ್ರಿಯದಾನೆ ||
ಮದಮುಖದಸುರರ ದಿಗಿಲಿಟ್ಟುಕೊಂದ
ಪುರಂದರವಿಠ್ಠಲನೆಂಬಾನೆ || ೩ ||
ಮರಿಯಾನೆ ಬಂದಿತಮ್ಮ || ಪ ||
ತೊಲಗಿರೆ ತೊಲಗಿರೆ ಪರಬ್ರಹ್ಮ
ಬಲು ಸರಪಳಿ ಕಡಕೊಂಡು ಬಂತಮ್ಮ || ಅ.ಪ ||
ಕಪಟನಾಟಕದ ಮರಿಯಾನೆ |
ನಿಕಟ ಸಭೆಯೊಳು ನಿಂತಾನೆ ||
ಶಕಟನ ಭಂಡಿಯ ಮುರಿದಾನೇ |
ಕಪಟನಾಟಕದಿಂದ ಸೋದರ ಮಾವನ
ಅಕಟಕಟೆನಿಸಿ ಕೊಂದಾನೆ || ೧ ||
ಕೀಳು ಭುವನವ ಉಂಡಾನೆ |
ಸ್ವಾಮಿ ಬಾಲಕನೆಂಬೋ ಚೆಲುವಾನೆ ||
ಚೆಲುವ ಕಾಳಿಂಗನ ಹೆಡೆಯಲಾಡುತ
ಮದಸೊಕ್ಕಿ ಬರುತಾನೆ || ೨ ||
ಭೀಮಾರ್ಜುನರನು ಗೆಲಿಸ್ಯಾನೆ |
ಪರಮಭಾಗವತರ ಪ್ರಿಯದಾನೆ ||
ಮದಮುಖದಸುರರ ದಿಗಿಲಿಟ್ಟುಕೊಂದ
ಪುರಂದರವಿಠ್ಠಲನೆಂಬಾನೆ || ೩ ||