ಅಂಗಳದೊಳು ರಾಮನಾಡಿದ
ರಚನೆಕಾರ: ಕನಕದಾಸರು
ವರ್ಗ: ಶ್ರೀರಾಮ
ಅಂಗಳದೊಳು ರಾಮನಾಡಿದ ಚಂದ್ರ
ಬೇಕೆಂದು ತಾ ಹಠ ಮಾಡಿದ || ಪ ||
ತಾಯಿಯ ಕರೆದು ಕೈ ಮಾಡಿ ತೋರಿದ
ಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ
ಚಿನ್ನಿಕೊಳು ಚಂಡು ಬುಗುರಿ ಎಲ್ಲವ
ಬೇಡ ಬೇಡ ಎಂದು ತಾ ಬಿಸಾಡಿದ || ೧ ||
ಕಂದ ಬಾ ಎಂದು ತಾಯಿ ಕರೆದಳು ಮಮ್ಮು
ಉಣ್ಣೆಂದು ಬಣ್ಣಿಸುತ್ತಿದ್ದಳು
ತಾಯಿ ಕೌಸಲ್ಯ ಕಳವಳಗೊಂಡಳು ಕಂದ
ಅಂಜಿದನು ಎನ್ನುತಿದ್ದಳು || ೨ ||
ಅಳುವ ಧ್ವನಿ ಕೇಳಿ ರಾಜನು ಮಂತ್ರಿ
ಸಹಿತಾಗಿ ಧಾವಿಸಿ ಬಂದನು
ನಿಲುವ ಕನ್ನಡಿ ತಂದಿರಿಸಿದ
ಶ್ರೀರಾಮನ ಎತ್ತಿ ಮುದ್ದಾಡಿದ || ೩ ||
ಕನ್ನಡಿಯೊಳು ಬಿಂಬ ನೋಡಿದ ಚಂದ್ರ
ಸಿಕ್ಕಿದನೆಂದು ಕುಣಿದಾಡಿದ
ಈ ಸಂಭ್ರಮ ನೋಡಿ ಆದಿಕೇಶವ
ರಘುವಂಶವನ್ನೇ ಕೊಂಡಾಡಿದ || ೪ ||
ಬೇಕೆಂದು ತಾ ಹಠ ಮಾಡಿದ || ಪ ||
ತಾಯಿಯ ಕರೆದು ಕೈ ಮಾಡಿ ತೋರಿದ
ಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ
ಚಿನ್ನಿಕೊಳು ಚಂಡು ಬುಗುರಿ ಎಲ್ಲವ
ಬೇಡ ಬೇಡ ಎಂದು ತಾ ಬಿಸಾಡಿದ || ೧ ||
ಕಂದ ಬಾ ಎಂದು ತಾಯಿ ಕರೆದಳು ಮಮ್ಮು
ಉಣ್ಣೆಂದು ಬಣ್ಣಿಸುತ್ತಿದ್ದಳು
ತಾಯಿ ಕೌಸಲ್ಯ ಕಳವಳಗೊಂಡಳು ಕಂದ
ಅಂಜಿದನು ಎನ್ನುತಿದ್ದಳು || ೨ ||
ಅಳುವ ಧ್ವನಿ ಕೇಳಿ ರಾಜನು ಮಂತ್ರಿ
ಸಹಿತಾಗಿ ಧಾವಿಸಿ ಬಂದನು
ನಿಲುವ ಕನ್ನಡಿ ತಂದಿರಿಸಿದ
ಶ್ರೀರಾಮನ ಎತ್ತಿ ಮುದ್ದಾಡಿದ || ೩ ||
ಕನ್ನಡಿಯೊಳು ಬಿಂಬ ನೋಡಿದ ಚಂದ್ರ
ಸಿಕ್ಕಿದನೆಂದು ಕುಣಿದಾಡಿದ
ಈ ಸಂಭ್ರಮ ನೋಡಿ ಆದಿಕೇಶವ
ರಘುವಂಶವನ್ನೇ ಕೊಂಡಾಡಿದ || ೪ ||