ಅನುಗಾಲವು ಚಿಂತೆ ಜೀವಕೆ
ರಚನೆಕಾರ: ಪುರಂದರದಾಸರು
ವರ್ಗ: ಶ್ರೀಕೃಷ್ಣ
ಅನುಗಾಲವು ಚಿಂತೆ ಜೀವಕೆ ಮನವು
ಶ್ರೀರಂಗನೋಳ್ ಮೆಚ್ಚುವ ತನಕ || ಪ ||
ಸತಿಯಿದ್ದರು ಚಿಂತೆ, ಸತಿಯಿಲ್ಲದ ಚಿಂತೆ
ಮತಿಹೀನ ಸತಿಯು ಆದರೂ ಚಿಂತೆ
ಪೃಥ್ವಿಯೊಳಗೆ ಸತಿ ಕಡು ಚೆಲ್ವೆಯಾದರೆ
ಮಿತಿ ಮೊದಲಿಲ್ಲದ ಮೋಹದ ಚಿಂತೆ || ೧ ||
ಬಡವನಾದರೂ ಚಿಂತೆ, ಬಲ್ಲಿದನಾಗೆ ಚಿಂತೆ
ಹಿಡಿ ಹೊನ್ನು ಕೈಯೊಳು ಇದ್ದರೂ ಚಿಂತೆ
ಪೊಡವಿಯೊಳಗೆ ನಮ್ಮ ಪುರಂದರ ವಿಠ್ಠಲನ
ಬಿಡದೆ ಧ್ಯಾನಿಸು, ಚಿಂತೆ ನಿಶ್ಚಿಂತೆ || ೨ ||
ಶ್ರೀರಂಗನೋಳ್ ಮೆಚ್ಚುವ ತನಕ || ಪ ||
ಸತಿಯಿದ್ದರು ಚಿಂತೆ, ಸತಿಯಿಲ್ಲದ ಚಿಂತೆ
ಮತಿಹೀನ ಸತಿಯು ಆದರೂ ಚಿಂತೆ
ಪೃಥ್ವಿಯೊಳಗೆ ಸತಿ ಕಡು ಚೆಲ್ವೆಯಾದರೆ
ಮಿತಿ ಮೊದಲಿಲ್ಲದ ಮೋಹದ ಚಿಂತೆ || ೧ ||
ಬಡವನಾದರೂ ಚಿಂತೆ, ಬಲ್ಲಿದನಾಗೆ ಚಿಂತೆ
ಹಿಡಿ ಹೊನ್ನು ಕೈಯೊಳು ಇದ್ದರೂ ಚಿಂತೆ
ಪೊಡವಿಯೊಳಗೆ ನಮ್ಮ ಪುರಂದರ ವಿಠ್ಠಲನ
ಬಿಡದೆ ಧ್ಯಾನಿಸು, ಚಿಂತೆ ನಿಶ್ಚಿಂತೆ || ೨ ||