ಅಪಮೃತ್ಯು ಪರಿಹರಿಸೋ ಅನಿಲದೇವ
ರಚನೆಕಾರ: ಜಗನ್ನಾಥದಾಸರು
ಗಾಯನ: ವಿಜಯ ಭಟ್
ವರ್ಗ: ಹನುಮಂತ
ಅಪಮೃತ್ಯು ಪರಿಹರಿಸೋ ಅನಿಲದೇವ || ಪ ||
ಕೃಪಣವತ್ಸಲನೆ ಕಾವರ ಕಾಣೆ ಜಗದೊಳಗೆ || ಅ.ಪ ||
ನಿನಗಿನ್ನು ಸಮರಾದ ಅನಿಮಿತ್ತ ಬಾಂದವರು
ಎನಗಿಲ್ಲ ಆವಾವ ಜನುಮದಲ್ಲಿ |
ಅನುದಿನವು ಎಮ್ಮನು ದಾಸೀನ ಮಾಡುವುದು
ಅನುಚಿತವು ಜನನಿ ಸಜ್ಜನ ಶಿಖಾಮಣಿಯೆ || ೧ ||
ಜ್ಞಾನಾಯು ರೂಪಕನು ನೀನಹುದು ವಾಣಿ
ಪಂಚಾನನಾದ್ಯಮರರಿಗೆ ಪ್ರಾಣದೇವ |
ದೀನ ವತ್ಸಲನೆಂದು ನಾ ನಿನ್ನ ಮೊರೆ ಹೊಕ್ಕೆ
ದಾನವಾರಣ್ಯ ಕೃಶಾನು ಸರ್ವದಾ ಎಮ್ಮ || ೪ ||
ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು
ಸಾಧಾರಣವಲ್ಲ ಸಾಧುಪ್ರಿಯನೇ |
ವೇದವಾದೋದಿತ ಜಗನ್ನಾಥವಿಠಲನ
ಪಾದ ಭಜನೆಯನಿತ್ತು ಮೋದ ಕೊಡು ಸತತ || ೫ ||
ಕೃಪಣವತ್ಸಲನೆ ಕಾವರ ಕಾಣೆ ಜಗದೊಳಗೆ || ಅ.ಪ ||
ನಿನಗಿನ್ನು ಸಮರಾದ ಅನಿಮಿತ್ತ ಬಾಂದವರು
ಎನಗಿಲ್ಲ ಆವಾವ ಜನುಮದಲ್ಲಿ |
ಅನುದಿನವು ಎಮ್ಮನು ದಾಸೀನ ಮಾಡುವುದು
ಅನುಚಿತವು ಜನನಿ ಸಜ್ಜನ ಶಿಖಾಮಣಿಯೆ || ೧ ||
ಜ್ಞಾನಾಯು ರೂಪಕನು ನೀನಹುದು ವಾಣಿ
ಪಂಚಾನನಾದ್ಯಮರರಿಗೆ ಪ್ರಾಣದೇವ |
ದೀನ ವತ್ಸಲನೆಂದು ನಾ ನಿನ್ನ ಮೊರೆ ಹೊಕ್ಕೆ
ದಾನವಾರಣ್ಯ ಕೃಶಾನು ಸರ್ವದಾ ಎಮ್ಮ || ೪ ||
ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು
ಸಾಧಾರಣವಲ್ಲ ಸಾಧುಪ್ರಿಯನೇ |
ವೇದವಾದೋದಿತ ಜಗನ್ನಾಥವಿಠಲನ
ಪಾದ ಭಜನೆಯನಿತ್ತು ಮೋದ ಕೊಡು ಸತತ || ೫ ||