ಅಪರಾಧಿ ನಾನಲ್ಲ
ರಚನೆಕಾರ: ಪುರಂದರದಾಸರು
ವರ್ಗ: ವಿಷ್ಣು
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಕಪಟನಾಟಕ ಸೂತ್ರಧಾರಿ ನೀನೆ || ಪ ||
ನೀನೆ ಆಡಿಸದಿರಲು ಜಡ ಒನಕೆಯ ಬೊಂಬೆ
ಏನು ಮಾಡಲು ಬಲ್ಲುದು ತಾನೆ ಬೇರೆ
ನೀನಿಟ್ಟ ಸೂತ್ರದಿಂ ಚಲಿಸುವವು ಕೈಕಾಲ್ಗಳು
ನೀನೆ ಮುಗ್ಗಿಸಲು ಮುಗ್ಗುವ ದೇಹದವನು || ೧ ||
ಒಂದೆಂಟು ಬಾಗಿಲುಗಳುಳ್ಳ ಪುರಕೆ
ತನ್ನದೆಂದು ಇಪ್ಪತ್ತಾರು ಮನೆಯಾಳ್ಗಳಾ
ತಂದು ಕಾವಲ ನಿಲಿಸಿ ಎನ್ನ ನೀ ಒಳಗಿಟ್ಟು
ಮುಂದೆ ಭವದಲ್ಲಿ ಬವಣಿಪುದು ನಿನ್ನದನ್ಯಾಯ || ೨ ||
ಯಂತ್ರವಾಹಕ ನೀನೆ ಒಳಗಿದ್ದು ಎನ್ನ ಸ್ವ-
ತಂತ್ರನೆಂದೆಣಿಸಿ ಕೊಲಿಸುವರೆ ಹೇಳೋ
ಕಂತುಪಿತ ಲಕ್ಷ್ಮೀಶ ಎಂತಾದಡಂತಹುದಾ
ಅನಂತಮೂರ್ತಿ ನಮ್ಮ ಪುರಂದರ ವಿಠಲ || ೩ ||
ಕಪಟನಾಟಕ ಸೂತ್ರಧಾರಿ ನೀನೆ || ಪ ||
ನೀನೆ ಆಡಿಸದಿರಲು ಜಡ ಒನಕೆಯ ಬೊಂಬೆ
ಏನು ಮಾಡಲು ಬಲ್ಲುದು ತಾನೆ ಬೇರೆ
ನೀನಿಟ್ಟ ಸೂತ್ರದಿಂ ಚಲಿಸುವವು ಕೈಕಾಲ್ಗಳು
ನೀನೆ ಮುಗ್ಗಿಸಲು ಮುಗ್ಗುವ ದೇಹದವನು || ೧ ||
ಒಂದೆಂಟು ಬಾಗಿಲುಗಳುಳ್ಳ ಪುರಕೆ
ತನ್ನದೆಂದು ಇಪ್ಪತ್ತಾರು ಮನೆಯಾಳ್ಗಳಾ
ತಂದು ಕಾವಲ ನಿಲಿಸಿ ಎನ್ನ ನೀ ಒಳಗಿಟ್ಟು
ಮುಂದೆ ಭವದಲ್ಲಿ ಬವಣಿಪುದು ನಿನ್ನದನ್ಯಾಯ || ೨ ||
ಯಂತ್ರವಾಹಕ ನೀನೆ ಒಳಗಿದ್ದು ಎನ್ನ ಸ್ವ-
ತಂತ್ರನೆಂದೆಣಿಸಿ ಕೊಲಿಸುವರೆ ಹೇಳೋ
ಕಂತುಪಿತ ಲಕ್ಷ್ಮೀಶ ಎಂತಾದಡಂತಹುದಾ
ಅನಂತಮೂರ್ತಿ ನಮ್ಮ ಪುರಂದರ ವಿಠಲ || ೩ ||