ಬಂದಾನೋ ರಾಘವೇಂದ್ರ

ರಚನೆಕಾರ: ಮಧ್ವೇಶ ವಿಠ್ಠಲ ದಾಸರು

ಗಾಯನ: ಶ್ರೀನಿಧಿ ರಾವ್

ವರ್ಗ: ರಾಘವೇಂದ್ರ ಸ್ವಾಮಿ

ಬಂದಾನೋ ರಾಘವೇಂದ್ರ ಇಂದಿಲ್ಲಿಗೆ || ಪ ||

ಕಂದನ ಮೊರೆ ಕೇಳಿ ಜನನಿಯು ಬರುವಂತೆ || ಅ.ಪ. ||

ಗಜವೇರಿ ಬಂದಾ ಜಗದಿ ತಾ ನಿಂದಾ
ಅಜಪಿತ ರಾಮನ ಪದಾಬ್ಜ ಸ್ಮರಿಸುತಲಿ || ೧ ||

ಹರಿಯ ಕುಣಿಸುತ ಬಂದಾ ನರಹರಿ ಪ್ರಿಯ ಬಂದಾ
ಶರಣಾಗತರನು ಕರವ ಪಿಡಿವೆನೆಂದು || ೨ ||

ಪ್ರಲ್ಹಾದ ವ್ಯಾಸ ಮುನೀಂದ್ರ ರಾಘವೇಂದ್ರ
ನಿಲಿಸುತ ಮನವ ಮಧ್ವೇಶವಿಠ್ಠಲನಲಿ || ೩ ||