ಬಾರೆ ನಮ್ಮನಿತನಕ

ರಚನೆಕಾರ: ಅಜ್ಞಾತ

ವರ್ಗ: ಲಕ್ಷ್ಮಿ

ಬಾರೆ ನಮ್ಮನಿತನಕ ಭಾಗ್ಯದ ದೇವಿ ಬಾರೆ ನಮ್ಮನಿತನಕ || ಪ ||

ಬಾರೆ ನಮ್ಮನಿತನಕ ಬಹಳ ಕರುಣದಿಂದ
ಜೋಡಿಸಿ ಕರಗಳ ಎರಗುವೆ ಚರಣಕೆ || ಅ.ಪ ||

ಹರಡಿ ಕಂಕಣ ದುಂಡು ಕರದಲ್ಲಿ ಹೊಳೆಯುತ
ಸರಗಿ ಸರವು ಚಂದ್ರಹಾರಗಳಲೆಯುತ || ೧ ||

ಜರದ ಪೀತಾಂಬರ ನಿರಿಗೆಗಳೆಲೆಯುತ
ತರಳನ ಮ್ಯಾಲೆ ತಾಯಿ ಕರುಣವಿಟ್ಟು ಬೇಗನೆ || ೨ ||

ಮಂದಗಮನೆ ನಿನಗೆ ವಂದಿಸಿ ಬೇಡುವೆ
ಇಂದಿರೇಶನ ಕೂಡ ಇಂದು ನಮ್ಮನಿತನಕ || ೩ ||