ಬಾರೋ ಬಾರೋ ಪಾಂಡುರಂಗ

ರಚನೆಕಾರ: ನರಸಿಂಹ ದಾಸರು

ಗಾಯನ: ಯು ಶಾಂತ

ವರ್ಗ: ವಿಠ್ಠಲ

ಬಾರೋ ಬಾರೋ ಪಾಂಡುರಂಗ ನೀನೇ ಗತಿ || ಪ ||

ತೋರೋ ತೋರೋ ನಿನ್ನ ಮುಖವ ರುಕ್ಮಿಣಿಪತಿ || ಅ.ಪ ||

ಚಂದ್ರಭಾಗ ತೀರದಲ್ಲಿ ವಾಸವಾಗಿರುವಿ |
ಮಂದರ ಗಿರಿಧರ ಸಿಂಧು ಶಯನ ಅಂದವಾಗಿರುವಿ || ೧ ||

ಶಂಖ ಚಕ್ರವನ್ನು ನೀನು ಎಲ್ಲಿ ಇಟ್ಟಿರುವಿ?
ಟೊಂಕದ ಮೇಲೆ ಕೈಯನಿಟ್ಟು ಏಕೆ ನಿಂತಿರುವಿ? || ೨ ||

ಭಕ್ತರನೆಲ್ಲ ಉದ್ಧರಿಸುವ ನೀನೆ ದೊರೆ |
ಭಕ್ತವತ್ಸಲ ನರಸಿಂಹವಿಠ್ಠಲ ಹರೆ || ೩ ||