ಬಾರೋ ಕೃಷ್ಣಯ್ಯ

ರಚನೆಕಾರ: ಕನಕದಾಸರು

ಗಾಯನ: ಶ್ರೀನಿಧಿ ರಾವ್

ವರ್ಗ: ಶ್ರೀಕೃಷ್ಣ

ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ ಕೃಷ್ಣಯ್ಯ || ಪ ||
ಬಾರೋ ನಿನ್ನ ಮುಖ ತೋರೋ ನಿನ್ನ ಸರಿ ಯಾರೋ ಜಗಧರ ಶೀಲನೇ || ಅ.ಪ ||

ಅಂದುಗೇ ಪಾಡಗವು ಕಾಲಂದುಗೆ ಕಿರು ಗೆಜ್ಜೆ ಧಿಮ್ ಧಿಮಿ
ಧಿಮಿ ಧಿಮಿ ಧಿಮಿರೆನುತ ಪೊಂಗೊಳಲನೂದುತ ಬಾರಯ್ಯ || ೧ ||

ಕಂಕಣ ಕರದಲ್ಲಿ ಪೊನ್ನುಂಗುರ ಹೊಳೆಯುತ ಕಿಂಕಿಣಿ ಕಿಣಿ ಕಿಣಿ ಕಿಣಿರೆನುತ
ಪೊಂಗೊಳಲೂದುತ ಬಾರಯ್ಯ ಬಾರೋ ಕೃಷ್ಣಯ್ಯ || ೨ ||

ವಾಸ ಉಡುಪಿಲಿ ನೆಲೆಯಾದಿ ಕೇಶವನೇ ದಾಸ ನಿನ್ನ ಪದ ದಾಸ
ದಾಸ ನಿನ್ನ ಪದ ದಾಸ ನಿನ್ನ ಪದ ದಾಸ || ೩ ||