ಬೇಡುವೆ ನಿನ್ನಡಿಯ ಸದಾಶಿವ
ರಚನೆಕಾರ: ಅಜ್ಞಾತ
ಗಾಯನ: ಶಶಿಕಾಂತ ರಾವ್
ವರ್ಗ: ಈಶ್ವರ
ಬೇಡುವೆ ನಿನ್ನಡಿಯ ಸದಾಶಿವ || ಪ ||
ಸಾಂದ್ರಾನಂದ ಸುದಾಮಯ ಶಿವನೇ
ಬೇಡುವೆನೈ ಅಭಯಾ ಸದಾಶಿವ || ೧ ||
ಪನ್ನಗಮಾಲ ವಿಶಾಲ ಚರಿತ್ರೆಯ
ಹಾಡುವೆನೈ ಸದಯಾ ಸದಾಶಿವ || ೨ ||
ಶೈಲಜೇಶ ತವ ಕಾಮನಿಕಾಮ
ಕೀರ್ತಿಪೆನೈ ಜೀಯಾ ಸದಾಶಿವ || ೩ ||
ಜ್ಞಾನ ವಿಧಾನ ಮಹಾಘನ ರೂಪನೆ
ಪಾಲಿಸು ಸನ್ಮತಿಯ ಸದಾಶಿವ || ೪ ||
ಭವತಾ ಪತ್ರಯ ಶೋಕ ನಿವಾರಣ
ತೋರು ಸದಾ ವಿಜಯಾ ಸದಾಶಿವ || ೫ ||
ಸಾಂದ್ರಾನಂದ ಸುದಾಮಯ ಶಿವನೇ
ಬೇಡುವೆನೈ ಅಭಯಾ ಸದಾಶಿವ || ೧ ||
ಪನ್ನಗಮಾಲ ವಿಶಾಲ ಚರಿತ್ರೆಯ
ಹಾಡುವೆನೈ ಸದಯಾ ಸದಾಶಿವ || ೨ ||
ಶೈಲಜೇಶ ತವ ಕಾಮನಿಕಾಮ
ಕೀರ್ತಿಪೆನೈ ಜೀಯಾ ಸದಾಶಿವ || ೩ ||
ಜ್ಞಾನ ವಿಧಾನ ಮಹಾಘನ ರೂಪನೆ
ಪಾಲಿಸು ಸನ್ಮತಿಯ ಸದಾಶಿವ || ೪ ||
ಭವತಾ ಪತ್ರಯ ಶೋಕ ನಿವಾರಣ
ತೋರು ಸದಾ ವಿಜಯಾ ಸದಾಶಿವ || ೫ ||