ಬೆಳಗಾಯ್ತು ಏಳು ಹೇ ಮುದ್ದು ಬೆನಕ
ರಚನೆಕಾರ: ವಿಜಯ ನಾರಸಿಂಹ
ವರ್ಗ: ಗಣೇಶ
ಬೆಳಗಾಯ್ತು ಏಳು ಹೇ ಮುದ್ದು ಬೆನಕ
ಭುವಿಯೆಲ್ಲ ರಂಗಾಯ್ತು ನೀ ಏಳು ಬೆನಕ || ಪ ||
ಅಂಬಾಪ್ರಿಯ ತನಯ ಆದಿಪೂಜಿತನೆ
ಮೂಡಣದೆ ರವಿಯೆದ್ದ ನೀ ಏಳು ಬೆನಕ || ೧ ||
ಮಾಮರದಿ ಕೋಗಿಲೆಯು ಪಚ್ಚವರ್ಣದ ಗಿಳಿಯು
ಸುಪ್ರಭಾತವ ನಿನಗೆ ಹಾಡುತಿವೆ ಬೆನಕ |
ಆ ನಿನ್ನ ಸುಂಡಿಲಿಯು ನಿನ್ನ ಬರುವನು ಕಾದು
ಕಾಳುಗಳ ತಿನ್ನುತಲಿ ಕುಳಿತಿಹುದು ಬೆನಕ || ೨ ||
ಹುಲ್ಲು ಗರಿಕೆಯು ಧೂರ್ವೆಯಾಗಿ ಕಾದಿಹುದು
ಪೂಜೆಯಲಿ ನಿನ್ನ ಅಲಂಕರಿಸಲೆಂದು |
ನಾಗಲಿಂಗದ ಪುಷ್ಪ ಕಮಲಗಳು ಕಾದಿಹವು
ಗಣಪತಿಯ ಅರ್ಚನೆಗೆ ಸಿದ್ಧವಾಗಿಹೆವೆಂದು || ೩ ||
ನಿನಗಾಗಿ ಮಾಡಿಟ್ಟ ತಂಬಿಟ್ಟು ಚಕ್ಕುಲಿ
ಕಾಯುತಿವೆ ನಿನ್ನ ಸ್ವೀಕಾರಕಾಗಿ |
ನಿನ್ನ ಪೂಜೆಯ ಮಾಡೆ ಭಕ್ತಜನ ವೃಂದ
ಕಾದಿಹುದು ನಿನ್ನ ವರ ಭಿಕ್ಷೆಗಾಗಿ || ೪ ||
ಭುವಿಯೆಲ್ಲ ರಂಗಾಯ್ತು ನೀ ಏಳು ಬೆನಕ || ಪ ||
ಅಂಬಾಪ್ರಿಯ ತನಯ ಆದಿಪೂಜಿತನೆ
ಮೂಡಣದೆ ರವಿಯೆದ್ದ ನೀ ಏಳು ಬೆನಕ || ೧ ||
ಮಾಮರದಿ ಕೋಗಿಲೆಯು ಪಚ್ಚವರ್ಣದ ಗಿಳಿಯು
ಸುಪ್ರಭಾತವ ನಿನಗೆ ಹಾಡುತಿವೆ ಬೆನಕ |
ಆ ನಿನ್ನ ಸುಂಡಿಲಿಯು ನಿನ್ನ ಬರುವನು ಕಾದು
ಕಾಳುಗಳ ತಿನ್ನುತಲಿ ಕುಳಿತಿಹುದು ಬೆನಕ || ೨ ||
ಹುಲ್ಲು ಗರಿಕೆಯು ಧೂರ್ವೆಯಾಗಿ ಕಾದಿಹುದು
ಪೂಜೆಯಲಿ ನಿನ್ನ ಅಲಂಕರಿಸಲೆಂದು |
ನಾಗಲಿಂಗದ ಪುಷ್ಪ ಕಮಲಗಳು ಕಾದಿಹವು
ಗಣಪತಿಯ ಅರ್ಚನೆಗೆ ಸಿದ್ಧವಾಗಿಹೆವೆಂದು || ೩ ||
ನಿನಗಾಗಿ ಮಾಡಿಟ್ಟ ತಂಬಿಟ್ಟು ಚಕ್ಕುಲಿ
ಕಾಯುತಿವೆ ನಿನ್ನ ಸ್ವೀಕಾರಕಾಗಿ |
ನಿನ್ನ ಪೂಜೆಯ ಮಾಡೆ ಭಕ್ತಜನ ವೃಂದ
ಕಾದಿಹುದು ನಿನ್ನ ವರ ಭಿಕ್ಷೆಗಾಗಿ || ೪ ||