ಭಾರವೇ ಭಾರತಿ ರಮಣ
ರಚನೆಕಾರ: ವಿಜಯ ದಾಸರು
ಗಾಯನ: ಶಶಿಕಾಂತ ರಾವ್
ವರ್ಗ: ಹನುಮಂತ
ಭಾರವೇ ಭಾರತಿ ರಮಣ
ನಿನಗೆ ನಾ ಭಾರವೇ ಭಾರತಿ ರಮಣ || ಪ ||
ಲಂಕಾನಾಥನ ಬಿಂಕವ ಮುರಿದು
ಅಕಳಂಕ ಚರಿತನ ಕಿಂಕರನೆನಿಸಿದೆ ||
ಪಂಕಜಾಕ್ಷಿಗೆ ಅಂಕಿತದುಂಗುರ ಕೊಟ್ಟು
ಶಂಕೆಯಿಲ್ಲದೆ ಲಂಕೆಯ ದಹಿಸಿದೆ || ೧ ||
ಸೋಮಕುಲದಿ ನಿಸ್ಸೀಮ ಮಹಿಮನೆನಿಸಿ
ತಾಮಸ ಬಕನ ನಿರ್ಧೂಮ ಮಾಡಿದೆ ||
ಕಾಮಿನಿ ಮೋಹಿಸೆ ಪ್ರೇಮದಿ ಸಲಹಿದೆ
ತಾಮರಸಾಖ್ಯನ ಸೇವೆಯ ಮಾಡಿದೆ || ೨ ||
ವೇದವ್ಯಾಸರ ಪೂಜೆಯ ಮಾಡಿ
ಮೋದದಿಂದ ಬಹುವಾದಗಳಾಡಿ ||
ಅಧಮ ಶಾಸ್ತ್ರಗಳ ಹೋಮವ ಮಾಡಿ
ವಿಜಯವಿಠ್ಠಲನ ಸೇವಕನೆನಿಸಿದೆ || ೩ ||
ನಿನಗೆ ನಾ ಭಾರವೇ ಭಾರತಿ ರಮಣ || ಪ ||
ಲಂಕಾನಾಥನ ಬಿಂಕವ ಮುರಿದು
ಅಕಳಂಕ ಚರಿತನ ಕಿಂಕರನೆನಿಸಿದೆ ||
ಪಂಕಜಾಕ್ಷಿಗೆ ಅಂಕಿತದುಂಗುರ ಕೊಟ್ಟು
ಶಂಕೆಯಿಲ್ಲದೆ ಲಂಕೆಯ ದಹಿಸಿದೆ || ೧ ||
ಸೋಮಕುಲದಿ ನಿಸ್ಸೀಮ ಮಹಿಮನೆನಿಸಿ
ತಾಮಸ ಬಕನ ನಿರ್ಧೂಮ ಮಾಡಿದೆ ||
ಕಾಮಿನಿ ಮೋಹಿಸೆ ಪ್ರೇಮದಿ ಸಲಹಿದೆ
ತಾಮರಸಾಖ್ಯನ ಸೇವೆಯ ಮಾಡಿದೆ || ೨ ||
ವೇದವ್ಯಾಸರ ಪೂಜೆಯ ಮಾಡಿ
ಮೋದದಿಂದ ಬಹುವಾದಗಳಾಡಿ ||
ಅಧಮ ಶಾಸ್ತ್ರಗಳ ಹೋಮವ ಮಾಡಿ
ವಿಜಯವಿಠ್ಠಲನ ಸೇವಕನೆನಿಸಿದೆ || ೩ ||