ದಾರಿ ಕಾಣದಾಗಿದೆ ರಾಘವೇಂದ್ರನೇ

ರಚನೆಕಾರ: ಅಜ್ಞಾತ

ಗಾಯನ: ಶ್ರೀನಿಧಿ ರಾವ್

ವರ್ಗ: ರಾಘವೇಂದ್ರ ಸ್ವಾಮಿ

ದಾರಿ ಕಾಣದಾಗಿದೆ ರಾಘವೇಂದ್ರನೇ || ಪ ||

ಬೆಳಕ ತೋರಿ ನಡೆಸುವ ಯೋಗಿವರಿಯನೇ || ಅ.ಪ ||

ಮನದ ಆಸೆ ತಿಳಿಸುವಾಸೆ ಹೇಗೆ ಹೇಳಲಿ |
ನಾಳೆ ಹೇಗೆ ಎಂಬ ಚಿಂತೆ ಇಂದು ಮನದಲಿ ||
ಕಲ್ಲು ಮುಳ್ಳು ಏನೇ ಇರಲಿ ಬಾಳ ಹಾದಿಲಿ |
ನಿನ್ನ ಕರುಣೆ ಇಂದ ಎಲ್ಲ ಸುಗಮವಾಗಲಿ || ೧ ||

ಯಾರ ಯಾರ ಸೇರಿಸುವೆಯೋ ಯಾರು ಬಲ್ಲರು |
ಯಾರ ನಗಿಸಿ ಅಳುಸುವೆಯೋ ಯಾರು ತಿಳಿಯರು ||
ನೀನು ಕುಣಿಸಿದಂತೆ ತಾನೇ ಎಲ್ಲ ಕುಣಿವವು |
ಜ್ಯೋತಿ ನೀನೆ ಬರಿಯ ಬಣ್ಣ ಹಣತೆ ಎಲ್ಲವೂ || ೨ ||