ದಯಮಾಡಿ ಸಲಹಯ್ಯ
ರಚನೆಕಾರ: ಶ್ರೀಪಾದರಾಜರು
ವರ್ಗ: ಹಯಗ್ರೀವ
ದಯಮಾಡಿ ಸಲಹಯ್ಯ ಭಯನಿವಾರಣನೆ
ಹಯವದನ ನಿನ್ನ ಚರಣ ನಂಬಿದೆನೊ ಜೀಯ || ಪ ||
ಕ್ಷಣ ಕ್ಷಣಕೆ ನಾ ಮಾಡಿದಂಥ ಪಾಪಂಗಳನು
ಎಣಿಸಲಳವಲ್ಲ ಅಷ್ಟಿಷ್ಟು ಎಂದು
ಫಣಿಶಾಯಿ ನೀನೆನ್ನ ಅವಗುಣಗಳೆನಿಸದೆ
ನೆನಹಿನಾತುರ ಕೊಟ್ಟು ದಾಸನೆಂದೆನಿಸಯ್ಯ || ೧ ||
ಕಂಡ ಕಂಡ ಕಡೆಗೆ ಪೋಪ ಚಂಚಲ ಮನವು
ಪಿಂಡ ತಿಂಬಲ್ಲಿ ಬಹು ನಿಷ್ಠ ತಾನು
ಭಂಡಾಟದವನೆಂದು ಬಯಲಿಗೆ ತಾರದೆ
ಕೊಂಡಾಡುವಂತೆ ಭಕುತಿಯ ಕೊಟ್ಟು ಸಲಹಯ್ಯ || ೨ ||
ಜಾತಿಧರ್ಮವ ಬಿಟ್ಟು ಅಜಾಮಿಳನು ಇರುತಿರಲು
ಪ್ರೀತಿಯಿಂದಲಿ ಮುಕುತಿ ಕೊಡಲಿಲ್ಲವೆ
ಖ್ಯಾತಿಯನು ಕೇಳಿ ನಾ ಮೊರೆಹೊಕ್ಕೆ ಸಲಹಯ್ಯ
ವಾತಜನ ಪರಿಪಾಲ ಶ್ರೀರಂಗವಿಠಲ || ೩ ||
ಹಯವದನ ನಿನ್ನ ಚರಣ ನಂಬಿದೆನೊ ಜೀಯ || ಪ ||
ಕ್ಷಣ ಕ್ಷಣಕೆ ನಾ ಮಾಡಿದಂಥ ಪಾಪಂಗಳನು
ಎಣಿಸಲಳವಲ್ಲ ಅಷ್ಟಿಷ್ಟು ಎಂದು
ಫಣಿಶಾಯಿ ನೀನೆನ್ನ ಅವಗುಣಗಳೆನಿಸದೆ
ನೆನಹಿನಾತುರ ಕೊಟ್ಟು ದಾಸನೆಂದೆನಿಸಯ್ಯ || ೧ ||
ಕಂಡ ಕಂಡ ಕಡೆಗೆ ಪೋಪ ಚಂಚಲ ಮನವು
ಪಿಂಡ ತಿಂಬಲ್ಲಿ ಬಹು ನಿಷ್ಠ ತಾನು
ಭಂಡಾಟದವನೆಂದು ಬಯಲಿಗೆ ತಾರದೆ
ಕೊಂಡಾಡುವಂತೆ ಭಕುತಿಯ ಕೊಟ್ಟು ಸಲಹಯ್ಯ || ೨ ||
ಜಾತಿಧರ್ಮವ ಬಿಟ್ಟು ಅಜಾಮಿಳನು ಇರುತಿರಲು
ಪ್ರೀತಿಯಿಂದಲಿ ಮುಕುತಿ ಕೊಡಲಿಲ್ಲವೆ
ಖ್ಯಾತಿಯನು ಕೇಳಿ ನಾ ಮೊರೆಹೊಕ್ಕೆ ಸಲಹಯ್ಯ
ವಾತಜನ ಪರಿಪಾಲ ಶ್ರೀರಂಗವಿಠಲ || ೩ ||