ದಯಮಾಡೊ ದಯಮಾಡೊ ಶ್ರೀನಿವಾಸ
ರಚನೆಕಾರ: ಪ್ರಸನ್ನವೆಂಕಟದಾಸರು
ಗಾಯನ: ರಜನಿ ರಮೇಶ್
ವರ್ಗ: ಶ್ರೀನಿವಾಸ
ದಯಮಾಡೊ ದಯಮಾಡೊ ಶ್ರೀನಿವಾಸ || ಪ ||
ಭವ ಭಯ ನಿವಾರಣ ಭಕ್ತರಘನಾಶ || ಅ.ಪ ||
ನೇಮವೆನ್ನಲಿಲ್ಲ ನಾಮ ಧರಿಕೆಯಿಲ್ಲ |
ನಾ ಮಹಾ ಪಾಪಿಯು ಸ್ವಾಮಿ ನೀನೊಲಿದು ಕಾಪಾಡು || ೧ ||
ಸದ್ಧರ್ಮ ಸರಕಿಲ್ಲ ಶುದ್ಧ ಬುದ್ಧಿಯು ಇಲ್ಲ
ಉದ್ಧರಿಸು ಎನ್ನ ಅನಿರುದ್ಧ ಹರಿ ಕರುಣಿ |
ಸತ್ಕುಲ ಹೊಂದೇನು ಸತ್ಕರ್ಮ ಮಾರ್ಗಿಲ್ಲ
ಭಕ್ತರಕ್ಷಕ ಪಾಪಮುಕ್ತ ದೇವರ ದೇವ || ೨ ||
ಅವಗುಣದ ಎಣಿಕೆಯ ವಿವರ ನೋಡದೆ ಅಯ್ಯ
ಜವನ ಬಲೆಯನು ತಪ್ಪಿಸುವ ಸರೀಸೃಪ ಶಯ್ಯ |
ಅಜಾಮಿಳ ವ್ಯಾಧ ಆ ಗಜ ಅಹಲ್ಯೋದ್ಧಾರ
ನಿಜ ಪ್ರಸನ್ನ ವೆಂಕಟೇಶ ಸುಜನ ಪರಿಪೋಷ || ೩ ||
ಭವ ಭಯ ನಿವಾರಣ ಭಕ್ತರಘನಾಶ || ಅ.ಪ ||
ನೇಮವೆನ್ನಲಿಲ್ಲ ನಾಮ ಧರಿಕೆಯಿಲ್ಲ |
ನಾ ಮಹಾ ಪಾಪಿಯು ಸ್ವಾಮಿ ನೀನೊಲಿದು ಕಾಪಾಡು || ೧ ||
ಸದ್ಧರ್ಮ ಸರಕಿಲ್ಲ ಶುದ್ಧ ಬುದ್ಧಿಯು ಇಲ್ಲ
ಉದ್ಧರಿಸು ಎನ್ನ ಅನಿರುದ್ಧ ಹರಿ ಕರುಣಿ |
ಸತ್ಕುಲ ಹೊಂದೇನು ಸತ್ಕರ್ಮ ಮಾರ್ಗಿಲ್ಲ
ಭಕ್ತರಕ್ಷಕ ಪಾಪಮುಕ್ತ ದೇವರ ದೇವ || ೨ ||
ಅವಗುಣದ ಎಣಿಕೆಯ ವಿವರ ನೋಡದೆ ಅಯ್ಯ
ಜವನ ಬಲೆಯನು ತಪ್ಪಿಸುವ ಸರೀಸೃಪ ಶಯ್ಯ |
ಅಜಾಮಿಳ ವ್ಯಾಧ ಆ ಗಜ ಅಹಲ್ಯೋದ್ಧಾರ
ನಿಜ ಪ್ರಸನ್ನ ವೆಂಕಟೇಶ ಸುಜನ ಪರಿಪೋಷ || ೩ ||