ದಯಮಾಡೋ ರಂಗ ದಯಮಾಡೋ

ರಚನೆಕಾರ: ಪುರಂದರದಾಸರು

ವರ್ಗ: ವಿಷ್ಣು

 ದಯಮಾಡೋ ರಂಗ ದಯಮಾಡೋ || ಪ ||

ದಯಮಾಡೋ ನಿನ್ನ ದಾಸನು ನಾನೆಂದು || ಅ.ಪ ||

 
ಹಲವು ಕಾಲದಿಂದ ನಿನ್ನ ಹಂಬಲ ಎನಗೆ |

ಒಲಿದು ಪಾಲಿಸಬೇದಯಮಾಡೋ ರಂಗಾಕು ವಾರಿಜನಾಭ || ೧ ||

ಇಹಪರಗತಿ ನೀನೆ ಇಂದಿರಾರಮಣ |

ಸಹಾಯ ನಿನ್ನದೇ ಸರ್ವದಾ ತೋರಿ ಕರುಣ || ೨ ||

ಕರಿರಾಜವರದನೆ ಕಾಮಿತ ಫಲದ |

ಪುರಂದರವಿಠಲ ಹರಿಸಾರ್ವಭೌಮ || ೩ ||