ಡೀ ಡೀ ಆಡ್ಯಾನೆ ರಂಗ
ರಚನೆಕಾರ: ವಿಜಯ ದಾಸರು
ವರ್ಗ: ಶ್ರೀಕೃಷ್ಣ
ಓಡಿ ಓಡಿ ಬಂದು ಹಣೆಗೆ
ಡೀ ಡೀ ಡಿಡಿಕ್ ಡಿಡಿಕ್ ಡಿಡಿಕ್ ಡಿಡಿಕ್ ಎಂದು
ಡೀ ಡೀ ಆಡ್ಯಾನೆ ರಂಗ ಡೀ ಡೀ ಆಡ್ಯಾನೆ || ಪ ||
ಮರುಕತ ನವರತ್ನ ವಜ್ರ ಹರಳು ಕೆತ್ತಿಸಿದ
ದ್ಯುಮಣಿ ಕಿರಣ ಮಕುಟ ಧರಿಸಿದ |
ಶಿರದಲ್ಲಿ ಸರಿ ಸರಿ ಸರಿ ಸರಿ ಸರಿ ಸರಿದಾಡುತ || ೧ ||
ಚಂದ್ರಶೇಖರ ಹಂಸವಾಹನ
ಇಂದ್ರದ್ಯಮರ ಆಕಾಶದಲ್ಲಿ |
ಡುಂ ಡುಂ ಡುಂ ಡುಂ ದುಂದುಭಿ ನುಡಿಸೆ |
ಬಂದೆ ಇಕ್ಕೋ ಬಂದೆ ಬಂದೆ ಬಂದೆನುತ || ೨ ||
ಹಿಂತಿರುಗಿ ಹೋಗಿ ನೀವು
ಅಂತರಿಸಿ ದೂರದಲ್ಲಿ |
ನಿಂತು ವಿಜಯ ವಿಠಲ ರಾಯನು
ಹಿಂತಿರಿರಿ ರಿರಿರಿ ರಿರಿ ಎಂದು… || ೩ ||
ಡೀ ಡೀ ಡಿಡಿಕ್ ಡಿಡಿಕ್ ಡಿಡಿಕ್ ಡಿಡಿಕ್ ಎಂದು
ಡೀ ಡೀ ಆಡ್ಯಾನೆ ರಂಗ ಡೀ ಡೀ ಆಡ್ಯಾನೆ || ಪ ||
ಮರುಕತ ನವರತ್ನ ವಜ್ರ ಹರಳು ಕೆತ್ತಿಸಿದ
ದ್ಯುಮಣಿ ಕಿರಣ ಮಕುಟ ಧರಿಸಿದ |
ಶಿರದಲ್ಲಿ ಸರಿ ಸರಿ ಸರಿ ಸರಿ ಸರಿ ಸರಿದಾಡುತ || ೧ ||
ಚಂದ್ರಶೇಖರ ಹಂಸವಾಹನ
ಇಂದ್ರದ್ಯಮರ ಆಕಾಶದಲ್ಲಿ |
ಡುಂ ಡುಂ ಡುಂ ಡುಂ ದುಂದುಭಿ ನುಡಿಸೆ |
ಬಂದೆ ಇಕ್ಕೋ ಬಂದೆ ಬಂದೆ ಬಂದೆನುತ || ೨ ||
ಹಿಂತಿರುಗಿ ಹೋಗಿ ನೀವು
ಅಂತರಿಸಿ ದೂರದಲ್ಲಿ |
ನಿಂತು ವಿಜಯ ವಿಠಲ ರಾಯನು
ಹಿಂತಿರಿರಿ ರಿರಿರಿ ರಿರಿ ಎಂದು… || ೩ ||