ದೇವಿ ನೀ ಪಾಲಿಸವ್ವ
ರಚನೆಕಾರ: ಅಜ್ಞಾತ
ಗಾಯನ: ಧರಿತ್ರಿ ಆನಂದರಾವ್
ವರ್ಗ: ಪಾರ್ವತಿ
ದೇವಿ ನೀ ಪಾಲಿಸವ್ವ ಪ್ರಸಾದವ || ಪ ||
ನುಡಿವಂಥ ಬಿನ್ನಪವ ಲಾಲಿಸಿ ನೀನು |
ಕೊಡು ನಮಗೆ ಇಷ್ಟಾರ್ಥವ ||
ಕಡುದೃಢದಿಂದಲಿ ಬಿಡದೆ ನಂಬಿದೆ ನಿನ್ನ |
ಜಡೆಯೊಳಗಿರಿಸಿದ ಮುಡಿವಾಳದೆಸಳನ್ನು || ೧ ||
ಭೃಂಗಕುಂತಳೇ ಕಲ್ಯಾಣಿ |
ಫಣಿವೇಣಿ ಸಂಕ ರಹಿತೇ ಶರ್ವಾಣಿ ||
ಮಂಗಳಾಂಗಿಯೇ ಮಹಾತುಂಗ ವಿಕ್ರಮರೂಪೆ |
ಶೃಂಗಾಲಾಗಿರಿಸಿಹ ಸಿಂಗಾರದೆಸಳನ್ನು || ೨ ||
ಚಂಡಿರೂಪವ ಧರಿಸಿ ಭೂಮಿಯ ಮೇಲೆ |
ಚಂಡಮುಂಡರ ವಧಿಸಿ ||
ಚಂಡನಾಡಿದೆ ದೇವಿ ಖಂಡಲಾರ್ಚಿತೆ |
ತವ ವಂದೆಯೊಳಿಹ ಚೆಲ್ವಾ |
ಕೆಂಡ ಸಂಪಿಗೆ ಹೂವ || ೩ ||
ಪುಳಿನಪುರದಿ ವಾಸಿಸಿ |
ಪುಣ್ಯಾತ್ಮರ ಕುಲದೇವಿಯೆಂದೆನಿಸಿ ||
ಹೊಳವು ದೊರುತಲೂರೆ ಚೆಲುವ ಭಕ್ತರ ಮನ |
ಕೊಲಿದು ಇಷ್ಟಾರ್ಥವ ಸಲಿಸುವ ಮಹಾದೇವಿ || ೪ ||
ನುಡಿವಂಥ ಬಿನ್ನಪವ ಲಾಲಿಸಿ ನೀನು |
ಕೊಡು ನಮಗೆ ಇಷ್ಟಾರ್ಥವ ||
ಕಡುದೃಢದಿಂದಲಿ ಬಿಡದೆ ನಂಬಿದೆ ನಿನ್ನ |
ಜಡೆಯೊಳಗಿರಿಸಿದ ಮುಡಿವಾಳದೆಸಳನ್ನು || ೧ ||
ಭೃಂಗಕುಂತಳೇ ಕಲ್ಯಾಣಿ |
ಫಣಿವೇಣಿ ಸಂಕ ರಹಿತೇ ಶರ್ವಾಣಿ ||
ಮಂಗಳಾಂಗಿಯೇ ಮಹಾತುಂಗ ವಿಕ್ರಮರೂಪೆ |
ಶೃಂಗಾಲಾಗಿರಿಸಿಹ ಸಿಂಗಾರದೆಸಳನ್ನು || ೨ ||
ಚಂಡಿರೂಪವ ಧರಿಸಿ ಭೂಮಿಯ ಮೇಲೆ |
ಚಂಡಮುಂಡರ ವಧಿಸಿ ||
ಚಂಡನಾಡಿದೆ ದೇವಿ ಖಂಡಲಾರ್ಚಿತೆ |
ತವ ವಂದೆಯೊಳಿಹ ಚೆಲ್ವಾ |
ಕೆಂಡ ಸಂಪಿಗೆ ಹೂವ || ೩ ||
ಪುಳಿನಪುರದಿ ವಾಸಿಸಿ |
ಪುಣ್ಯಾತ್ಮರ ಕುಲದೇವಿಯೆಂದೆನಿಸಿ ||
ಹೊಳವು ದೊರುತಲೂರೆ ಚೆಲುವ ಭಕ್ತರ ಮನ |
ಕೊಲಿದು ಇಷ್ಟಾರ್ಥವ ಸಲಿಸುವ ಮಹಾದೇವಿ || ೪ ||