ಡೊಂಕು ಬಾಲದ ನಾಯಕರೆ
ರಚನೆಕಾರ: ಕನಕದಾಸರು
ವರ್ಗ: ಉಪದೇಶಾತ್ಮಕ
ಡೊಂಕು ಬಾಲದ ನಾಯಕರೆ
ನೀವೇನೂಟವ ಮಾಡುವಿರಿ || ಪ ||
ಕಣಕ ಕುಟ್ಟೋ ಅಲ್ಲಿಗೆ ಹೋಗಿ
ಹಣಕಿ ಇಣಕಿ ನೋಡುವಿರಿ
ಕಣಕ ಕುಟ್ಟೋ ಒನಕೆಯಲ್ಲಿ ಬಡಿದರೆ
ಕಂಞ ಕುಂಞ ಕಂಞ ಕುಂಞ ಮಾಡುವಿರಿ || ೧ ||
ಹುಗ್ಗಿ ಮಾಡೋ ಅಲ್ಲಿಗೆ ಹೋಗಿ
ತಗ್ಗಿ ಬಗ್ಗಿ ನೋಡುವಿರಿ
ಹುಗ್ಗಿ ಮಾಡೋ ಸೌಟಲಿ ಬಡಿದರೆ
ಕಂಞ ಕುಂಞ ಕಂಞ ಕುಂಞ ಮಾಡುವಿರಿ || ೨ ||
ಹಿರೇ ಬೀದಿಯಲಿ ಓಡುವಿರಿ
ಕರೇ ಬೂದಿಯಲಿ ಹೊರಳುವಿರಿ
ಪುರಂದರ ವಿಠ್ಠಲರಾಯನ ಈ ಪರಿ
ಮರೆತು ಸದಾ ನೀವು ಚಲಿಸುವಿರಿ || ೩ ||
ನೀವೇನೂಟವ ಮಾಡುವಿರಿ || ಪ ||
ಕಣಕ ಕುಟ್ಟೋ ಅಲ್ಲಿಗೆ ಹೋಗಿ
ಹಣಕಿ ಇಣಕಿ ನೋಡುವಿರಿ
ಕಣಕ ಕುಟ್ಟೋ ಒನಕೆಯಲ್ಲಿ ಬಡಿದರೆ
ಕಂಞ ಕುಂಞ ಕಂಞ ಕುಂಞ ಮಾಡುವಿರಿ || ೧ ||
ಹುಗ್ಗಿ ಮಾಡೋ ಅಲ್ಲಿಗೆ ಹೋಗಿ
ತಗ್ಗಿ ಬಗ್ಗಿ ನೋಡುವಿರಿ
ಹುಗ್ಗಿ ಮಾಡೋ ಸೌಟಲಿ ಬಡಿದರೆ
ಕಂಞ ಕುಂಞ ಕಂಞ ಕುಂಞ ಮಾಡುವಿರಿ || ೨ ||
ಹಿರೇ ಬೀದಿಯಲಿ ಓಡುವಿರಿ
ಕರೇ ಬೂದಿಯಲಿ ಹೊರಳುವಿರಿ
ಪುರಂದರ ವಿಠ್ಠಲರಾಯನ ಈ ಪರಿ
ಮರೆತು ಸದಾ ನೀವು ಚಲಿಸುವಿರಿ || ೩ ||