ಎದುರಾರೊ ಗುರುವೆ ಸಮರಾರೊ
ರಚನೆಕಾರ: ವ್ಯಾಸರಾಜ ತೀರ್ಥರು
ವರ್ಗ: ಗುರು ಕೀರ್ತನೆ
ಎದುರಾರೊ ಗುರುವೆ ಸಮರಾರೊ || ಪ ||
ಮದನ ಗೋಪಾಲನ ಪ್ರಿಯ ಜಯರಾಯ || ಅ.ಪ. ||
ಕಡು ಗರ್ಜಿಸುವ ಕೇಸರಿಯಂತೆ ನಿಮ್ಮ ವಾದ
ಗಡಣೆಯ ಕೇಳುತ ನುಡಿ ಮುಂದೋಡದೆ
ಗಡ ಗಡ ನಡಗುತ ಮಾಯ್ಗೋಮಾಯ್ಗಳು
ಅಡವಿಯೊಳಡಗೋರು ನಿಮ್ಮ ಭೀತಿಯಲಿ || ೧ ||
ಕುಟಿಲ ಮತಗಳೆಂಬೋ ಚಟುಲಂಧಕಾರಕ್ಕೆ
ಪಟುತರ ತತ್ತ್ವಪ್ರಕಾಶಿಕೆಯೆಂತೆಂಬ
ಚಟುಲಾತಪದಿಂದ ಖಂಡಿಸಿ ತೇಜೋ
ತ್ಕಟದಿ ಮೆರೆದೆ ಬುಧಕಟಕಾಬ್ಜ ಮಿತ್ರ || ೨ ||
ಅಮಿತ ದ್ವಿಜಾವಳಿ ಕುಮುದಗಳರಳಿಸಿ
ವಿಮತರ ಮುಖ ಕಮಲಂಗಳ ಬಾಡಿಸಿ
ಸ್ವಮತರ ಹೃತ್ಸಂತಾಪಗಳೋಡಿಸಿ
ವಿಮಲ ಸುಕೀರ್ತಿಯ ಪಡೆದೆಯೋ ಚಂದ್ರ || ೩ ||
ವೇದಶಾಸ್ತ್ರಗಳೆಂಬೊ ಶೃಂಗಗಳಿಂದ ಸು
ಧಾದಿ ಗ್ರಂಥಗಳೆಂಬೊ ಸ್ತನದಿಂದೊಪ್ಪುತ ತತ್ತ್ವ
ಬೋಧನೆಯೆಂಬ ದುಗ್ದ ಶಿಷ್ಯವತ್ಸಂಗಳಿಗೆ
ಆದರದಲಿ ಕೊಟ್ಟ ಯತಿಸುರಧೇನು || ೪ ||
ವ್ಯಾಸಸೂತ್ರಗಳೆಂಬ ಮಂದರವನು ವೇದ
ರಾಶಿಯೆಂಬ ವಾರಾಶಿಯೊಳಿಟ್ಟು
ಶ್ರೀ ಸರ್ವಜ್ಞರ ವಾಕ್ಯಪಾಶದಿ ಸುತ್ತಿ
ಭಾಸುರ ನ್ಯಾ ಸುಧಾ ಪಡೆದೆ ಯತೀಂದ್ರ || ೫ ||
ವನಜನಾಭನ ಗುಣಮಣಿಗಳ ಸರ್ವಜ್ಞ-
ಮುನಿಕೃತ ಗ್ರಂಥಗಳವನಿಯೊಳಡಗೆ ಸ-
ಜ್ಜನರಿಗೆ ಟೀಕಾಂಜನದಿಂದ ತೋರಿಸಿ
ಘನ ಸುಖಸಾಧನ ಮಾಡಿದ್ಯೋ ಧೀರ || ೬ ||
ಅರ್ಥಿಮಂದಾರ ವೇದಾರ್ಥವಿಚಾರ ಸ-
ಮರ್ಥ ಶ್ರೀ ಕೃಷ್ಣ ಪಾದಾಂಬುಜಲೋಲ ಪ್ರ-
ತ್ಯರ್ಥಿ ಮತ್ತೇಭಕಂಠೀರವ ಕ್ಷೋಭ್ಯ-
ತೀರ್ಥ ಕರಜ ಜಯತೀರ್ಥ ಯತೀಂದ್ರ || ೭ ||
ಮದನ ಗೋಪಾಲನ ಪ್ರಿಯ ಜಯರಾಯ || ಅ.ಪ. ||
ಕಡು ಗರ್ಜಿಸುವ ಕೇಸರಿಯಂತೆ ನಿಮ್ಮ ವಾದ
ಗಡಣೆಯ ಕೇಳುತ ನುಡಿ ಮುಂದೋಡದೆ
ಗಡ ಗಡ ನಡಗುತ ಮಾಯ್ಗೋಮಾಯ್ಗಳು
ಅಡವಿಯೊಳಡಗೋರು ನಿಮ್ಮ ಭೀತಿಯಲಿ || ೧ ||
ಕುಟಿಲ ಮತಗಳೆಂಬೋ ಚಟುಲಂಧಕಾರಕ್ಕೆ
ಪಟುತರ ತತ್ತ್ವಪ್ರಕಾಶಿಕೆಯೆಂತೆಂಬ
ಚಟುಲಾತಪದಿಂದ ಖಂಡಿಸಿ ತೇಜೋ
ತ್ಕಟದಿ ಮೆರೆದೆ ಬುಧಕಟಕಾಬ್ಜ ಮಿತ್ರ || ೨ ||
ಅಮಿತ ದ್ವಿಜಾವಳಿ ಕುಮುದಗಳರಳಿಸಿ
ವಿಮತರ ಮುಖ ಕಮಲಂಗಳ ಬಾಡಿಸಿ
ಸ್ವಮತರ ಹೃತ್ಸಂತಾಪಗಳೋಡಿಸಿ
ವಿಮಲ ಸುಕೀರ್ತಿಯ ಪಡೆದೆಯೋ ಚಂದ್ರ || ೩ ||
ವೇದಶಾಸ್ತ್ರಗಳೆಂಬೊ ಶೃಂಗಗಳಿಂದ ಸು
ಧಾದಿ ಗ್ರಂಥಗಳೆಂಬೊ ಸ್ತನದಿಂದೊಪ್ಪುತ ತತ್ತ್ವ
ಬೋಧನೆಯೆಂಬ ದುಗ್ದ ಶಿಷ್ಯವತ್ಸಂಗಳಿಗೆ
ಆದರದಲಿ ಕೊಟ್ಟ ಯತಿಸುರಧೇನು || ೪ ||
ವ್ಯಾಸಸೂತ್ರಗಳೆಂಬ ಮಂದರವನು ವೇದ
ರಾಶಿಯೆಂಬ ವಾರಾಶಿಯೊಳಿಟ್ಟು
ಶ್ರೀ ಸರ್ವಜ್ಞರ ವಾಕ್ಯಪಾಶದಿ ಸುತ್ತಿ
ಭಾಸುರ ನ್ಯಾ ಸುಧಾ ಪಡೆದೆ ಯತೀಂದ್ರ || ೫ ||
ವನಜನಾಭನ ಗುಣಮಣಿಗಳ ಸರ್ವಜ್ಞ-
ಮುನಿಕೃತ ಗ್ರಂಥಗಳವನಿಯೊಳಡಗೆ ಸ-
ಜ್ಜನರಿಗೆ ಟೀಕಾಂಜನದಿಂದ ತೋರಿಸಿ
ಘನ ಸುಖಸಾಧನ ಮಾಡಿದ್ಯೋ ಧೀರ || ೬ ||
ಅರ್ಥಿಮಂದಾರ ವೇದಾರ್ಥವಿಚಾರ ಸ-
ಮರ್ಥ ಶ್ರೀ ಕೃಷ್ಣ ಪಾದಾಂಬುಜಲೋಲ ಪ್ರ-
ತ್ಯರ್ಥಿ ಮತ್ತೇಭಕಂಠೀರವ ಕ್ಷೋಭ್ಯ-
ತೀರ್ಥ ಕರಜ ಜಯತೀರ್ಥ ಯತೀಂದ್ರ || ೭ ||