ಈ ಮುದ್ದು ಕೃಷ್ಣನ
ರಚನೆಕಾರ: ವಾದಿರಾಜ ತೀರ್ಥರು
ಗಾಯನ: ಶಾಂಭವಿ ರಾವ್
ವರ್ಗ: ಶ್ರೀಕೃಷ್ಣ
ಈ ಮುದ್ದು ಕೃಷ್ಣನ ಕ್ಷಣದ ಸುಖವೇ ಸಾಕು
ಶ್ರೀ ಮಧ್ವಮುನಿಯ ಮನೆದೈವ ಉಡುಪಿನ ಕೃಷ್ಣ || ಪ ||
ಚೆಲುವ ಚರಣದ್ವಂದ್ವ ಜಂಘಜಾನೂರುಕಟಿ
ವಳಿ ಪಂಕ್ತಿ ಜಠರ ವಕ್ಷಸ್ಕಂಬುಕಂಧರದಿ |
ನಳಿತೋಳು ಮುದ್ದುಮುಖ ನಳಿನ ನಾಸಿಕ ಕರ್ಣ
ಸುಳಿಗುರುಳು ಮಸ್ತಕದ ನಳಿನನಾಭನ ಸೊಬಗು || ೧ ||
ಕಿರುಗೆಜ್ಜೆ ಕಡಿಪೆಂಡೆ ಘಂಟಾಕಟಿಸೂತ್ರ
ವರಹಾರ ಪದಕ ಶ್ರೀವತ್ಸ ಕೌಸ್ತುಭರತ್ನ |
ಉರುಮುದ್ರೆ ಕಂಕಣಾಂಗದ ಕುಂಡಲ ಪ್ರಭಾ
ಸಿರಿನಾಮ ಮುಕುಟ ನಾಸಿಕದ ವರಮಣಿಯ || ೨ ||
ಸಕಲ ದೇವೊತ್ತಮನೆ ಸರ್ವಗುಣ ಸಂಪೂರ್ಣ
ಅಖಿಳಾಗಮಸ್ತುತನೆ ಅಪ್ರಾಕೃತನೆ |
ಅಖಿಲ ಜೀವರ ಭಿನ್ನನೆನಿಪ ಹಯವದನನ
ಮುಕುರ ಕಡೆಗೋಲು ನೇಣು ಸಹಿತ ಪಿಡಿದಿಹ ಸ್ವಾಮಿ || ೩ ||
ಶ್ರೀ ಮಧ್ವಮುನಿಯ ಮನೆದೈವ ಉಡುಪಿನ ಕೃಷ್ಣ || ಪ ||
ಚೆಲುವ ಚರಣದ್ವಂದ್ವ ಜಂಘಜಾನೂರುಕಟಿ
ವಳಿ ಪಂಕ್ತಿ ಜಠರ ವಕ್ಷಸ್ಕಂಬುಕಂಧರದಿ |
ನಳಿತೋಳು ಮುದ್ದುಮುಖ ನಳಿನ ನಾಸಿಕ ಕರ್ಣ
ಸುಳಿಗುರುಳು ಮಸ್ತಕದ ನಳಿನನಾಭನ ಸೊಬಗು || ೧ ||
ಕಿರುಗೆಜ್ಜೆ ಕಡಿಪೆಂಡೆ ಘಂಟಾಕಟಿಸೂತ್ರ
ವರಹಾರ ಪದಕ ಶ್ರೀವತ್ಸ ಕೌಸ್ತುಭರತ್ನ |
ಉರುಮುದ್ರೆ ಕಂಕಣಾಂಗದ ಕುಂಡಲ ಪ್ರಭಾ
ಸಿರಿನಾಮ ಮುಕುಟ ನಾಸಿಕದ ವರಮಣಿಯ || ೨ ||
ಸಕಲ ದೇವೊತ್ತಮನೆ ಸರ್ವಗುಣ ಸಂಪೂರ್ಣ
ಅಖಿಳಾಗಮಸ್ತುತನೆ ಅಪ್ರಾಕೃತನೆ |
ಅಖಿಲ ಜೀವರ ಭಿನ್ನನೆನಿಪ ಹಯವದನನ
ಮುಕುರ ಕಡೆಗೋಲು ನೇಣು ಸಹಿತ ಪಿಡಿದಿಹ ಸ್ವಾಮಿ || ೩ ||