ಎಲ್ಲಿ ನೋಡಿದರಲ್ಲಿ ರಾಮ
ರಚನೆಕಾರ: ಕನಕದಾಸರು
ವರ್ಗ: ಶ್ರೀರಾಮ
ಎಲ್ಲಿ ನೋಡಿದರಲ್ಲಿ ರಾಮ – ಇದ || ಪ ||
ಬಲ್ಲ ಜಾಣರ ದೇಹದೊಳಗೆ ನೋಡಣ್ಣ || ಅ.ಪ. ||
ಕಣ್ಣೇ ಕಾಮನ ಬೀಜ – ಈ ಕಣ್ಣಿಂದಲೇ ನೋಡು
ಮೋಕ್ಷ ಸಾಮ್ರಾಜ್ಯ ಕಣ್ಣಿನ ಮೂರುತಿ ಬಿಗಿದು – ಒಳಗಣ್ಣಿಂದಲೇ ದೇವರ ನೋಡಣ್ಣ || ೧ ||
ಮೂಗೇ ಶ್ವಾಸ ನಿಶ್ವಾಸ – ಈ ಮೂಗಿಂದಲೇ ಕಾಣೊ ಯೋಗ ಸಂನ್ಯಾಸ
ಮೂಗನಾದರೆ ವಿಶೇಷ – ಒಳಮೂಗಲಿ ನೋಡಣ್ಣ ಲೀಲಾವಿಲಾಸ || ೨ ||
ಕಿವಿಯೇ ಕರ್ಮಕೆ ದ್ವಾರ – ಈ ಕಿವಿಯಿಂದಲೇ ಕೇಳೋ ಮೋಕ್ಷದ ಸಾರ
ಕಿವಿಯೇ ಕರ್ಮ ಕುಠಾರ – ಒಳಗಿವಿಯಲ್ಲಿ ಕಾಣೊ ನಾದದ ಬೇರ || ೩ ||
ಬೊಮ್ಮ ಮಾಡಿದ ತನುಬಿಟ್ಟು – ವಿಶ್ವಕರ್ಮನು ಮಾಡಿದ ಬೊಂಬೆಯನಿಟ್ಟು
ಸುಮ್ಮನೆ ಕೂಗುಗಳಿಟ್ಟು – ಅದನಂಬುವನೆಂಬೋನು ಹೋಹ ಕಂಗೆಟ್ಟು || ೪ ||
ರೂಢಿಯೊಳಗೆ ಶುದ್ಧ ಮೂಢ – ಈ ಕಾಡುಕಲ್ಲುಗಳನ್ನು ನಂಬಬೇಡ
ನಾಡಾಡಿ ದೈವಗಳನೆಲ್ಲ – ನಮ್ಮ ಬಡದಾದಿ ಕೇಶವನೊಬ್ಬನೆ ಬಲ್ಲ || ೫ ||