ಏನ್ ಸವಿ ಏನ್ ಸವಿ ಹರಿನಾಮ
ರಚನೆಕಾರ: ಪುರಂದರದಾಸರು
ವರ್ಗ: ವಿಷ್ಣು
ಏನ್ ಸವಿ ಏನ್ ಸವಿ ಹರಿನಾಮ
ಮನಸು ತೃಪ್ತಿಯಾಗ್ವದು ಪ್ರೇಮ || ಪ ||
ಜನರಿಗೆ ತಿಳಿಯದು ಇದರ ಮಹಿಮ
ಘನ ಮಹಿಮ ವಿಷ್ಣು ಸಾಸಿರನಾಮ || ಅ.ಪ ||
ಪ್ರಹ್ಲಾದಗೊಲಿದ ಹರಿನಾಮದಿಂದ
ಅಲ್ಲಲ್ಲಲ್ಲ ಧ್ರುವ ರಾಜೇಂದ್ರ |
ಫಲ್ಗುಣಗೆ ಫಲಿಸಿತು ಹೆಚ್ಚೆಂದು
ರಾಮ್ ರಾಮ್ ರಾಮ್ ರಾಮ್ ಸರ್ವ ಜಗಕೂ || ೧ ||
ರಕ್ಷಣೆಯ ಮಾಡುವುದು ಹರಿನಾಮ
ಮೋಕ್ಷ ಪದವಿ ಕೊಡುವುದು ನೇಮ |
ಕೃಷ್ಣ ಕೃಷ್ಣ ಶ್ರೀಹರಿ ಸರ್ವೋತ್ತಮ
ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮ || ೨ ||
ಹರಿ ಹರಿ ಹರಿಸ್ಮರಣೆ ಮಾಡಬೇಕು
ಹರ ಹರ ಹರ ಎಂದು ಅನ್ನಬೇಕು |
ವೇದಗಳು ಸಾರುತಿವೆ ಇವು ನಾಲ್ಕು
ಪುರಂದರವಿಠಲನೆ ಸರ್ವ ಜಗಕೂ || ೩ ||
ಮನಸು ತೃಪ್ತಿಯಾಗ್ವದು ಪ್ರೇಮ || ಪ ||
ಜನರಿಗೆ ತಿಳಿಯದು ಇದರ ಮಹಿಮ
ಘನ ಮಹಿಮ ವಿಷ್ಣು ಸಾಸಿರನಾಮ || ಅ.ಪ ||
ಪ್ರಹ್ಲಾದಗೊಲಿದ ಹರಿನಾಮದಿಂದ
ಅಲ್ಲಲ್ಲಲ್ಲ ಧ್ರುವ ರಾಜೇಂದ್ರ |
ಫಲ್ಗುಣಗೆ ಫಲಿಸಿತು ಹೆಚ್ಚೆಂದು
ರಾಮ್ ರಾಮ್ ರಾಮ್ ರಾಮ್ ಸರ್ವ ಜಗಕೂ || ೧ ||
ರಕ್ಷಣೆಯ ಮಾಡುವುದು ಹರಿನಾಮ
ಮೋಕ್ಷ ಪದವಿ ಕೊಡುವುದು ನೇಮ |
ಕೃಷ್ಣ ಕೃಷ್ಣ ಶ್ರೀಹರಿ ಸರ್ವೋತ್ತಮ
ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮ || ೨ ||
ಹರಿ ಹರಿ ಹರಿಸ್ಮರಣೆ ಮಾಡಬೇಕು
ಹರ ಹರ ಹರ ಎಂದು ಅನ್ನಬೇಕು |
ವೇದಗಳು ಸಾರುತಿವೆ ಇವು ನಾಲ್ಕು
ಪುರಂದರವಿಠಲನೆ ಸರ್ವ ಜಗಕೂ || ೩ ||