ಎನಗೊಬ್ಬ ದೊರೆ ದೊರಕಿದನು
ರಚನೆಕಾರ: ಪುರಂದರದಾಸರು
ವರ್ಗ: ವಿಷ್ಣು
ಎನಗೊಬ್ಬ ದೊರೆ ದೊರಕಿದನು || ಪ ||
ವನಜ ಸಂಭವನಯ್ಯ ಹನುಮಂತರ್ಯಾಮಿ || ಅ.ಪ. ||
ಮಾತಾ ಪಿತನಾದ ಭಾತೃ ಬಾಂಧವನಾದ
ಪ್ರೀತಿಯಿಂದಲೆ ತಾ ನಾಥನಾದ
ಖ್ಯಾತನು ತಾನಾದ ದಾತನು ತಾನಾದ
ಭೂತೇಶ ವಂದ್ಯ ವಿಭೂತಿಪ್ರದನಾದ || ೧ ||
ಅಜರಾಮರಣನಾದ ಅಪ್ರಾಕೃತನಾದ
ವಿಜಯಗೊಲಿದು ನಿಜ ದೂತನಾದ
ಭುಜಗ ಶಯನನಾದ ತ್ರಿಜಗ ವಂದಿತನಾದ
ಅಜಾಮಿಳನ ಅಂತ್ಯಕೆ ಸುಹೃದನಾದ || ೨ ||
ಶಂಖ ಚಕ್ರಾಂಕಿತ ಸಂಕರುಷಣನಾದ
ಬಿಂಕದಿಂದಲೆ ಬಿರುದು ಪೊತ್ತವನಾದ
ಪಂಕಜನಯನ ಮೀನಾಂಕ ಜನಕನಾದ
ಓಂಕಾರ ಮೂರ್ತಿ ಪುರಂದರ ವಿಠಲ || ೩ ||
ವನಜ ಸಂಭವನಯ್ಯ ಹನುಮಂತರ್ಯಾಮಿ || ಅ.ಪ. ||
ಮಾತಾ ಪಿತನಾದ ಭಾತೃ ಬಾಂಧವನಾದ
ಪ್ರೀತಿಯಿಂದಲೆ ತಾ ನಾಥನಾದ
ಖ್ಯಾತನು ತಾನಾದ ದಾತನು ತಾನಾದ
ಭೂತೇಶ ವಂದ್ಯ ವಿಭೂತಿಪ್ರದನಾದ || ೧ ||
ಅಜರಾಮರಣನಾದ ಅಪ್ರಾಕೃತನಾದ
ವಿಜಯಗೊಲಿದು ನಿಜ ದೂತನಾದ
ಭುಜಗ ಶಯನನಾದ ತ್ರಿಜಗ ವಂದಿತನಾದ
ಅಜಾಮಿಳನ ಅಂತ್ಯಕೆ ಸುಹೃದನಾದ || ೨ ||
ಶಂಖ ಚಕ್ರಾಂಕಿತ ಸಂಕರುಷಣನಾದ
ಬಿಂಕದಿಂದಲೆ ಬಿರುದು ಪೊತ್ತವನಾದ
ಪಂಕಜನಯನ ಮೀನಾಂಕ ಜನಕನಾದ
ಓಂಕಾರ ಮೂರ್ತಿ ಪುರಂದರ ವಿಠಲ || ೩ ||