ಏನೆ ಮನವಿತ್ತೆ ಲಲಿತಾಂಗಿ

ರಚನೆಕಾರ: ಕನಕದಾಸರು

ವರ್ಗ: ಶ್ರೀಕೃಷ್ಣ

ಏನೆ ಮನವಿತ್ತೆ ಲಲಿತಾಂಗಿ
ಅಸಮಾನ ಗೋವಳ ಕುಲವಿಲ್ಲದವನೊಳು || ಪ ||

ಮಗಗೆ ಮೈದುನನಾದ ಮಗಳಿಗೆ ಪತಿಯಾದ
ಮಗಳಿಗಳಿಯನಾದ ಅಳಿಯಗಳಿಯನಾದ || ೧ ||

ಮಗಳ ಮಗಗೆ ಮೈದುನನಾಗಿ ಮಾವನ
ಜಗವರಿಯಲು ಕೊಂದ ಕುಲಗೇಡಿ ಗೋವಳ || ೨ ||

ಅತ್ತೆಗೆ ವಲ್ಲಭನಾದ ಭೃತ್ಯರಿಗಾಳಾದ
ಚಿತ್ತ ಒಲಿದು ಚೆನ್ನ ಆದಿಕೇಶವನೊಳು || ೩ ||