ಎನ್ನ ಮನದ ಡೊಂಕ ತಿದ್ದಯ್ಯ

ರಚನೆಕಾರ: ವರದವಿಠಲ ದಾಸರು

ಗಾಯನ: ಶಾಂಭವಿ ರಾವ್

ವರ್ಗ: ಶ್ರೀಕೃಷ್ಣ

ಎನ್ನ ಮನದ ಡೊಂಕ ತಿದ್ದಯ್ಯ ಗೋಪಾಲಕೃಷ್ಣ || ಪ ||

ಎನ್ನ ಮನದ ಡೊಂಕ ತಿದ್ದಿ ಮುನ್ನ ಮನ್ನಿಸದಿರೆ |
ಬನ್ನೆ ಪಾಡಲಾರೆ ಭವಧಿ ಎನ್ನ ದಾಟಿಸೊ ಅಪಾರ ಮಹಿಮ || ಅ.ಪ ||

ಉದಯವಾದರೆ ಉದರ ಚಿಂತೆ ಉಂಡ ಮೇಲೆ ಭೋಗದ ಚಿಂತೆ |
ಅದರ ಮೇಲೆ ಹದಿನಾಲ್ಕು ಲೋಕಂಗಳ ಆಳ್ವ ಚಿಂತೆ || ೧ ||

ಸುಖವು ಬಂದರೆ ನಾನೆ ಸಮತ ದುಃಖ ಬಂದರೆ ಹರಿಯ ಮಾತ |
ರೊಕ್ಕ ಬಂದರೆ ನಾನೆ ಧನಿಕ ಸಿಕ್ಕಿಬಿದ್ದರೆ ಹರಿಯ ವ್ಯಾಪಾರ || ೨ ||

ತಿಳಿದು ತಿಳಿದು ಪತಂಗ ಹುಳವು ಕಿಚ್ಚಿನೊಳಗೆ ಬೀಳೋಹಂಗೆ |
ಕಾಲಕಳೆದೆ ಮೂರ್ಖನಂತೆ ಮುದ್ದು ಶ್ರೀ ಹಯವದನನೆ || ೩ ||