ಏನು ಸುಕೃತವ ಮಾಡಿದಳೊ ಯಶೋದೆ
ರಚನೆಕಾರ: ವಾದಿರಾಜ ತೀರ್ಥರು
ಗಾಯನ: ಸುಚೇತಾ ತೇಜಸ್ವಿ
ವರ್ಗ: ಶ್ರೀಕೃಷ್ಣ
ಏನು ಸುಕೃತವ ಮಾಡಿದಳೊ ಯಶೋದೆ || ಪ ||
ಗಾನಲೋಲನ ಎತ್ತಿ ಮುದ್ದಿಸುವಳಂತೆ || ಅ.ಪ ||
ಗಂಗಾಜನಕಗೆ ಗಡಿಗೆ ನೀರನೆರೆವಳಂತೆ |
ಮಂಗಳಾಂಗಗೆ ಭಾಮೆ ಶೃಂಗರಿಸುವಳಂತೆ ||
ತುಂಗ ಭೂಧರನ ತೊಟ್ಟಿಲೊಳು ಮಲಗಿಸುವಳಂತೆ |
ಕಂಗಳಿಗಗೋಚರನ ಎತ್ತಿ ಮುದ್ದಿಪಳಂತೆ || ೧ ||
ಬಹುಮುಖನಿಗೆ ಭಾಮೆ ಮುತ್ತ ನೀಡುವಳಂತೆ |
ಅತಿಶಯನನಿಗೆ ಹಾವು ಕಚ್ಚಿತು ಎನ್ನುವಳಂತೆ ||
ಬಹುದೈತ್ಯ ಸಂಹರಗೆ ಭಯವ ತೋರುಪಿಳಂತೆ |
ಮಹಿಮ ನರಹರಿಗೆ ಗುಮ್ಮನ ತೋರುವಳಂತೆ || ೪ ||
ಕಡಗೋಲ ನೇಣ ಕೈಯೊಳ ಪಿಡಿದು |
ಪಾಲ್ಗಡಲೊಡೆಯ ದ್ವಾರಕಾನಿಲಯ ||
ಬಿಡದೆ ಸಲಹುವ ಹಯವದನ ಮೋಹನ ಮುದ್ದು |
ಉಡುಪಿ ಶ್ರೀಕೃಷ್ಣನ ಉಡಿಯೊಳೆತ್ತುವಳಂತೆ || ೫ ||
ಗಾನಲೋಲನ ಎತ್ತಿ ಮುದ್ದಿಸುವಳಂತೆ || ಅ.ಪ ||
ಗಂಗಾಜನಕಗೆ ಗಡಿಗೆ ನೀರನೆರೆವಳಂತೆ |
ಮಂಗಳಾಂಗಗೆ ಭಾಮೆ ಶೃಂಗರಿಸುವಳಂತೆ ||
ತುಂಗ ಭೂಧರನ ತೊಟ್ಟಿಲೊಳು ಮಲಗಿಸುವಳಂತೆ |
ಕಂಗಳಿಗಗೋಚರನ ಎತ್ತಿ ಮುದ್ದಿಪಳಂತೆ || ೧ ||
ಬಹುಮುಖನಿಗೆ ಭಾಮೆ ಮುತ್ತ ನೀಡುವಳಂತೆ |
ಅತಿಶಯನನಿಗೆ ಹಾವು ಕಚ್ಚಿತು ಎನ್ನುವಳಂತೆ ||
ಬಹುದೈತ್ಯ ಸಂಹರಗೆ ಭಯವ ತೋರುಪಿಳಂತೆ |
ಮಹಿಮ ನರಹರಿಗೆ ಗುಮ್ಮನ ತೋರುವಳಂತೆ || ೪ ||
ಕಡಗೋಲ ನೇಣ ಕೈಯೊಳ ಪಿಡಿದು |
ಪಾಲ್ಗಡಲೊಡೆಯ ದ್ವಾರಕಾನಿಲಯ ||
ಬಿಡದೆ ಸಲಹುವ ಹಯವದನ ಮೋಹನ ಮುದ್ದು |
ಉಡುಪಿ ಶ್ರೀಕೃಷ್ಣನ ಉಡಿಯೊಳೆತ್ತುವಳಂತೆ || ೫ ||