ಗಜಮುಖನೆ ಗಣಪತಿಯೇ
ರಚನೆಕಾರ: ವಿಜಯ ನಾರಸಿಂಹ
ವರ್ಗ: ಗಣೇಶ
ಗಜಮುಖನೆ ಗಣಪತಿಯೇ ನಿನಗೆ ವಂದನೆ |
ನಂಬಿದವರ ಪಾಲಿನ ಕಲ್ಪತರು ನೀನೆ || ಪ ||
ಬಾದ್ರಪದ ಶುಕ್ಲದ ಚೌತಿಯಂದು |
ನೀ ಮನೆಮನೆಗು ದಯಮಾಡಿ ಹರಸು ಎಂದು |
ನಿನ್ನ ಸನ್ನಿಧಾನಕೆ ತಲೆಬಾಗಿ ಕೈಯ ಮುಗಿದು |
ಬೇಡುವ ಭಕ್ತರಿಗೆ ನೀ ದಯಾ ಸಿಂಧು || ೧ ||
ಈರೇಳು ಲೋಕದ ಅಣುಅಣುವಿನ |
ಇಹಪರದ ಸಾಧನಕೆ ನೀನೆ ಕಾರಣ |
ನಿನ್ನೊಲುಮೆ ನೋಟದ ಒಂದೇ ಹೊನ್ನ ಕಿರಣ |
ನೀಡಿದರೆ ಸಾಕಯ್ಯ ಜನ್ಮ ಪಾವನ || ೨ ||
ಪಾರ್ವತಿ ಪರಶಿವನ ಪ್ರೇಮ ಪುತ್ರನೇ |
ಪಾಲಿಸುವ ಪರದೈವ ಬೇರೆ ಕಾಣೆ |
ಪಾಪದ ಪಂಕದಲಿ ಪದುಮ ಎನಿಸು ಎನ್ನಾ |
ಪಾದಸೇವೆ ಒಂದೇ ಧರ್ಮ ಸಾಧನ || ೩ ||
ನಂಬಿದವರ ಪಾಲಿನ ಕಲ್ಪತರು ನೀನೆ || ಪ ||
ಬಾದ್ರಪದ ಶುಕ್ಲದ ಚೌತಿಯಂದು |
ನೀ ಮನೆಮನೆಗು ದಯಮಾಡಿ ಹರಸು ಎಂದು |
ನಿನ್ನ ಸನ್ನಿಧಾನಕೆ ತಲೆಬಾಗಿ ಕೈಯ ಮುಗಿದು |
ಬೇಡುವ ಭಕ್ತರಿಗೆ ನೀ ದಯಾ ಸಿಂಧು || ೧ ||
ಈರೇಳು ಲೋಕದ ಅಣುಅಣುವಿನ |
ಇಹಪರದ ಸಾಧನಕೆ ನೀನೆ ಕಾರಣ |
ನಿನ್ನೊಲುಮೆ ನೋಟದ ಒಂದೇ ಹೊನ್ನ ಕಿರಣ |
ನೀಡಿದರೆ ಸಾಕಯ್ಯ ಜನ್ಮ ಪಾವನ || ೨ ||
ಪಾರ್ವತಿ ಪರಶಿವನ ಪ್ರೇಮ ಪುತ್ರನೇ |
ಪಾಲಿಸುವ ಪರದೈವ ಬೇರೆ ಕಾಣೆ |
ಪಾಪದ ಪಂಕದಲಿ ಪದುಮ ಎನಿಸು ಎನ್ನಾ |
ಪಾದಸೇವೆ ಒಂದೇ ಧರ್ಮ ಸಾಧನ || ೩ ||