ಗಜವದನ ಬೇಡುವೆ

ರಚನೆಕಾರ: ಪುರಂದರದಾಸರು

ವರ್ಗ: ಗಣೇಶ

ಗಜವದನ ಬೇಡುವೆ ಗೌರೀತನಯ |
ತ್ರಿಜಗ ವಂದಿತನೆ ಸುಜನರ ಪೊರೆವನೆ || ಪ ||

ಪಾಶಾಂಕುಶಧರ ಪರಮಪವಿತ್ರ |
ಮೂಷಿಕ ವಾಹನ ಮುನಿಜನ ಪ್ರೇಮ || ೧ ||

ಮೋದದಿ ನಿನ್ನಯ ಪಾದವ ತೋರೋ |
ಸಾಧುವದಿಂತನೆ ಆದರದಿಂದಲಿ || ೨ ||

ಸರಸಿಜನಾಭ ಶ್ರೀ ಪುರಂದರ ವಿಠಲನ |
ನಿರುತ ನೆನೆಯುವಂತೆ ದಯಾಮಾಡೋ || ೩ ||