ಗಜೇಂದ್ರ ಮೋಕ್ಷ
ರಚನೆಕಾರ: ಪುರಂದರದಾಸರು
ವರ್ಗ: ವಿಷ್ಣು
ನಾರಾಯಣಾಯ ನಮೋ ನಾಗೇಂದ್ರಶಯನಾಯ
ನಾರದಾದ್ಯಖಿಳ ಮುನಿನಮಿತ ಚರಣಾಂಭೋಜ
ಸಾರಿದರೆ ಪೊರೆವ ಕಂಸಾರಿ ರಕ್ಷಿಪುದಿಂದು ಕಾರುಣ್ಯದಿಂದ ಒಲಿದು || ಪ ||
ಪಾಂಡ್ಯದೇಶದೊಳು ಇಂದ್ರದ್ಯುಮ್ನನೆಂಬ ಭೂ
ಮಂಡಲಾಧಿಪನು ವೈರಾಗ್ಯದಲಿ ಹರಿಪಾದ
ಪುಂಡರೀಕನ ಧ್ಯಾನದಿಂ ಮಹಾತಪದೊಳಿರೆ ಚಂಡತಾಪಸ ಅಗಸ್ತ್ಯಹಿಂಡು ಶಿಷ್ಯರವೆರಸಿ ಬರಲು ಸತ್ಕರಿಸದಿರೆ
ಕಂಡು ಗಜಯೋನಿಯಲಿ ಜನಿಸು ಹೋಗೆನುತ ಉದ್ದಂಡ ಶಾಪವನಿತ್ತು
ಮುನಿ ಪೋದನಾಕ್ಷಣದಿ ಶುಂಡಾಲನಾದನರಸ || ೧ ||
ಕ್ಷೀರಸಾಗರತಡಿಯ ಐದು ಯೋಜನದ
ವಿಸ್ತಾರದಲಿ ವರತ್ರಿಕೂಟಾದ್ರಿ ಶೃಂಗತ್ರಯದ ರಾರಾಜಿಸುತಲಿಪ್ಪ
ರಜತ ತಾಮ್ರಧ್ವಜದ ಮೇರುಸಮ ಗಾಂಭೀರ್ಯದಿ
ಪಾರಿಜಾತಾಂಭೋಜ ತುಳಸಿ ಮಲ್ಲಿಗೆ ಜಾಜಿ
ಸೌರಭದೊಳಶ್ವತ್ಥಪೂಗ ಪುನ್ನಾಗ
ಜಂಬೀರಾದಿ ತರುಗುಲ್ಮ ಖಗ ಮೃಗಗಳೆಸೆವಲ್ಲಿ ವಾರಣೇಂದ್ರನು
ಮೆರೆದನು || ೨ ||
ಆನೆ ಹೆಣ್ಣಾನೆ ಮರಿಯಾನೆಗಳ ಸಹಿತ ಆ
ಕಾನನದಿ ನಲಿಯುತ್ತ ಬೇಸಿಗೆಯ ಬಿಸಿಲಿನಲಿ
ತಾ ನೀರಡಿಸಿ ಬಂದುದೊಂದು ಸರಸಿಗೆ ಸಲಿಲಪಾನಾಭಿಲಾಷೆಯಿಂದ
ನಾನಾ ಪ್ರಕಾರದಲಿ ಜಲಕ್ರೀಡೆಯಾಡುತಿರೆ
ಏನಿದೆತ್ತಣ ರಭಸನೆಂದುಗ್ರಕೋಪದಿಂದಾ
ನೆಗಳು ಬಾಯ್ತೆರೆದು ನುಂಗಿಕೊಂಡಂಘ್ರಿಯನು ಏನೆಂಬೆನಾಕ್ಷಣದೊಳು || ೩ ||
ಒತ್ತಿ ಹಿಡಿದೆಳೆಯುತಿರೆ ಎತ್ತಣದಿದೇನೆನುತ
ಮತ್ತಗಜರಾಜ ಅವುಡೊತ್ತಿ ಘೀಳಿಡುತಲೆಳದೊತ್ತಿ
ತಂದುದು ದಡಕೆ ಮತ್ತೆ
ನಡುಮಡುವಿನೊಳಗೆತ್ತೆಳೆದುದಾ ನೆಗಳವು
ಇತ್ತಂಡವಿತ್ತು ಕಾದಿತ್ತು ಸಾವಿರ ವರುಷ
ವಿಸ್ತರಿಸಿತೇನೆಂಬೆ ಮತ್ತಾ ಗಜೇಂದ್ರಂಗೆ
ಸತ್ವ ತಗ್ಗಿತು ತನ್ನ ಚಿತ್ತದೊಳು ಧ್ಯಾನಿಸುತ ಮತ್ತಾರು ಗತಿಯೆನುತಲಿ || ೪ ||
ಬಂದುದಾ ಸಮಯದಲಿ ಹಿಂದೆ ಮಾಡಿದ ಸುಕೃತದಿಂದ
ದಿವ್ಯಜ್ಞಾನ ಕಣ್ದೆರದು ಕೈಮುಗಿದು
ವಂದಿಸಿದ ಮನದೊಳರವಿಂದನಾಭಾಚ್ಯುತ ಮುಕುಂದ ಮುನಿವೃಂದವಂದ್ಯ
ಇಂದಿರಾರಮಣ ಗೋವಿಂದ
ಕೇಶವ ಭಕ್ತ
ಬಂಧು ಕರುಣಾಸಿಂಧು ತಂದೆ ನೀ ಸಲಹೆನ್ನ
ಬಂದು ಸಿಲುಕಿದೆನು ಬಲು ದಂದುಗದ ಮಾಯಾ ಪ್ರಬಂಧದಿಂ ನೆಗಳಿನಿಂದ || ೫ ||
ಪರಮಾತ್ಮ ಪರಿಪೂರ್ಣ ಪರಮೇಶ ಪರತತ್ತ್ವ
ಪರತರ ಪರಂಜ್ಯೋತಿ ಪರಮಪಾವನ ಮೂರ್ತಿ
ಉರುತರಾ ಪರಬ್ರಹ್ಮ ಆನಂದ ಪರಮೇಷ್ಠಿ ಪರಾತ್ಪರ ಪರಮಪುರುಷ
ನಿರುಪಮ ನಿಜಾನಂದ ನಿರ್ಭಯ ನಿರಾವರಣ
ನಿರವಧಿಕ ನಿರ್ಗುಣ ನಿರಂಜನ ನಿರಾಧಾರ
ನಿರವೇದ್ಯ ನಿಸ್ಸಂಗ ನಿಶ್ಚಿಂತ್ಯ ನಿತ್ಯನೇ ನೋಯಿಸದೆ
ಸಲಹೆನ್ನನು || ೬ ||
ಇಂತೆನುತ ಮೂರ್ಛೆಯಲಿ ಗುಪಿತ ಕಂಠಧ್ವನಿಯೊಳಂತರಾತ್ಮಕನ
ನೆನೆಯುತ್ತಳುತ್ತಿರಲಿತ್ತನಂತ
ಮಹಿಮನು ಕೇಳಿ ಕರುಣದಿಂದಾಕ್ಷಣಾನಂತಶಯನದಲೆದ್ದನು
ಸಂತಪಿಸಿ ಸಿರಿಮುಡಿಯು ಗರುಡವಾಹನನಾಗಿ
ಚಿಂತೆ ಬೇಡೇಳೆನುತ ಅಭಯಹಸ್ತವನಿತ್ತೇ
ಕಾಂತ ಭಕ್ತನ ಬಳಿಗೆ ಬಂದೆರಡು
ಕೈಯಿಂದ ದಂತಿವರನನುನೆಗೆಹಿದ || ೭ ||
ನೆಗಳ ಬಾಯನು ಚಕ್ರದಲಿ ಸೀಳಿ ಕರಿವರನ
ಉಗುವ ಕರುಣದಲಿ ಮೈದಡಹಲ್ಕೆ ಗಜ ಜನ್ಮ ತೆಗುದುದಾಕ್ಷಣದಿ ಮಣಿಮಕರಕುಂಡಲದಿಂದ ಮಿಗೆ ಶೋಭಿಸುತಲೆಸೆದನು
ವಿಗಡ ದೇವಲ ಋಷಿಯ ಶಾಪದಲಿ ಬಿದ್ದಿಳೆಗೆ ಮಿಗೆ ನಕ್ರನಾಗಿ ಹೂಹೂ ಎಂಬ ಗಂಧರ್ವ
ಅಘಹರನ ಕಂಡು ನಿಜಗತಿಗೈದುದಮರರೋಳ್ ಮಿಗೆ
ಮೆರೆದುದೋಲೈಸುತ || ೮ ||
ಮಣಿಮಯ ಕಿರೀಟಕುಂಡಲ ಹಾರಕೌಸ್ತುಭದ
ಮಿನುಗುತಿಹ ವೈಜಯಂತಿಯ ಛೂಷಣಾಂಗದ
ಫಣೆಯ ಕಸ್ತೂರಿ ತಿಲಕ ನಾಮದಿಂದೆಸೆವುತಿಹ ವರ ಶಂಖ ಚಕ್ರದಿಂದ
ಝಣಿಝಣಿತ ನೂಪುರದ ದಂತ ಪಂಕ್ತಿಯ ಕೃಪೇ
ಕ್ಷಣದ ಸಿರಿಮೊಗದ ಪೀತಾಂಬರಾಲಂಕೃತ್ಯದ
ಮಣಿದಾ ಜಯ ಜಯವೆಂಬ ಸುರಸಿದ್ಧ ಸಾಧ್ಯ ಸಂದಣಿಯೊಳಗೆ ಹರಿ ಮೆರೆದನು || ೯ ||
ಹರಿಸ್ತುತಿಯ ಗೈದಂಘ್ರಿಗೆರಗಲಾ ಭೂಪನಾದರದಿಂದ
ಸತ್ಕರಿಸಿ ಶರಧಿ ಶ್ವೇತದೀಪ
ಗಿರಿಶೃಂಗ ವಾರಾಶಿ ತರುಶೇಷ ವಾಲ್ಮೀಕಿ ಮುನಿ ಧರಣಿ ಧ್ರುವ ಲಕ್ಷ್ಮಿಯು
ಹರ ಗಿರಿಜೆ ವಿಧಿ ವಾಣಿ ನಾರದ ಪ್ರಹಲ್ಲಾದ
ಗರುಡ ಗೋ ವಿಪ್ರ ಋಷಿ ಗಂಗಾರ್ಕ ಚಂದ್ರಾಗ್ನಿ
ಸಿರಿವತ್ಸ ಶಂಖ ಚಕ್ರಾದಿಯವತಾರಗಳ ಸ್ಮರಿಸುವರ ಕಾಯ್ವೆನೆಂದ || ೧೦ ||
ಆವನಿದನುದಯಕಾಲದೊಳೆದ್ದು ನಿಜ ಭಕ್ತಿ
ಭಾವ ಶುದ್ಧಗಳಿಂದ ಪೇಳಿ ಕೇಳುವ ಜನರಘಾವಳಿಯ ಪರಿಹರಿಸಿ ಸುಜ್ಞಾನ ಪದವಿತ್ತು ದೇಹವಸಾನದೊಳಗೆ
ಶ್ರೀ ವಾಸುದೇವನಾಜ್ಞಾಪಿಸಿ ಗಜೇಂದ್ರ ಸಹಿತಾ ವಿಹಂಗಾಧಿಪನನೇರಿ ವೈಕಂಠಕ್ಕೆ
ದೇವ ಬಿಜಯಂಗೈದ ಶ್ರೀಹರಿ
ಪುರಂದರವಿಠಲನು ಸೇವಕರಿಗಿತು ಚಿತ್ತವೆ || ೧೧ ||