ಗಣಪತಿ ಎನ್ನ ಪಾಲಿಸೋ

ರಚನೆಕಾರ: ವೆಂಕಟ ವಿಠ್ಠಲ ದಾಸ

ಗಾಯನ: ಸೌಜನ್ಯ

ವರ್ಗ: ಗಣೇಶ

ಗಣಪತಿ ಎನ್ನ ಪಾಲಿಸೋ ಗಂಭೀರ || ಪ ||

ಪಾರ್ವತಿ ನಂದನ ಸುಂದರ ವದನ |
ಶರ್ವಾದಿ ಸುರವಂದ್ಯ ಶಿರಭಾಗುವೆನಾ || ೧ ||

ಆದಿ ಪೂಜಿತ ನೀನು ಮೋದ ಭಕ್ತರಿಗಿತ್ತು |
ಮಾಧವನಲಿ ಮನ ಸದಾ ನಿಲಿಸು ನೀ || ೨ ||

ಪಂಕಜ ನಯನಶ್ರೀ ವೆಂಕಟ ವಿಠಲನ |
ಕಿಂಕರನೆನೆಸೆನ್ನ ಶಂಕರ ತನಯನೆ || ೩ ||