ಗಂಗಾದಿ ಸಕಲ ತೀರ್ಥಂಗಳಿಗಧಿಕ
ರಚನೆಕಾರ: ಪುರಂದರದಾಸರು
ಗಾಯನ: ವಿಜಯ ಭಟ್
ವರ್ಗ: ವಿಷ್ಣು
ಗಂಗಾದಿ ಸಕಲ ತೀರ್ಥಂಗಳಿಗಧಿಕ
ಶ್ರೀ ಹರಿಯ ನಾಮಾ |
ಹಿಂಗದೆ ನೆನೆವರಿಗೆ ಮಂಗಳ ಪದವೀವ
ಶ್ರೀ ಹರಿಯ ನಾಮಾ || ಪ ||
ಸ್ನಾನ ಜಪಂಗಳ ಸಾದಿಸದವನಿಗೆ
ಶ್ರೀ ಹರಿಯ ನಾಮಾ ||
ಜ್ಞಾನವನಿಯರಿಯದ ಮೂಡಾತ್ಮರಿಗಿದು
ಶ್ರೀ ಹರಿಯ ನಾಮಾ || ೧ ||
ವೇದ ಶಾಸ್ತ್ರಂಗಳ ಓದದ ಮನುಜಗೆ
ಶ್ರೀ ಹರಿಯ ನಾಮಾ ||
ಸಾಧನಗಳ ನಾಲ್ಕು ಸಾಧಿಸದವನಿಗೆ
ಶ್ರೀ ಹರಿಯ ನಾಮಾ || ೨ ||
ಕಾಲನ ದೂತರ ತರಿದು ಬಿಸಾಡುವುದು
ಶ್ರೀ ಹರಿಯ ನಾಮಾ ||
ಲೋಲ ಶ್ರೀಪುರಂದರವಿಠ್ಠಲನ ಒಲುಮೆಗೆ
ಶ್ರೀ ಹರಿಯ ನಾಮಾ || ೩ ||
ಶ್ರೀ ಹರಿಯ ನಾಮಾ |
ಹಿಂಗದೆ ನೆನೆವರಿಗೆ ಮಂಗಳ ಪದವೀವ
ಶ್ರೀ ಹರಿಯ ನಾಮಾ || ಪ ||
ಸ್ನಾನ ಜಪಂಗಳ ಸಾದಿಸದವನಿಗೆ
ಶ್ರೀ ಹರಿಯ ನಾಮಾ ||
ಜ್ಞಾನವನಿಯರಿಯದ ಮೂಡಾತ್ಮರಿಗಿದು
ಶ್ರೀ ಹರಿಯ ನಾಮಾ || ೧ ||
ವೇದ ಶಾಸ್ತ್ರಂಗಳ ಓದದ ಮನುಜಗೆ
ಶ್ರೀ ಹರಿಯ ನಾಮಾ ||
ಸಾಧನಗಳ ನಾಲ್ಕು ಸಾಧಿಸದವನಿಗೆ
ಶ್ರೀ ಹರಿಯ ನಾಮಾ || ೨ ||
ಕಾಲನ ದೂತರ ತರಿದು ಬಿಸಾಡುವುದು
ಶ್ರೀ ಹರಿಯ ನಾಮಾ ||
ಲೋಲ ಶ್ರೀಪುರಂದರವಿಠ್ಠಲನ ಒಲುಮೆಗೆ
ಶ್ರೀ ಹರಿಯ ನಾಮಾ || ೩ ||