ಗೋವರ್ಧನ ಗಿರಿಧರ ಗೋವಿಂದ

ರಚನೆಕಾರ: ನಾರಾಯಣ ತೀರ್ಥರು

ವರ್ಗ: ಶ್ರೀಕೃಷ್ಣ

ಗೋವರ್ಧನ ಗಿರಿಧರ ಗೋವಿಂದ
ಗೋಕುಲಪಾಲಕ ಪರಮಾನಂದ
ಶ್ರೀವತ್ಸಾಂಕಿತ ಶ್ರೀಕೌಸ್ತುಭಧರ
ಭಾವಕ ಭಯಹರ ಪಾಹಿ ಮುಕುಂದ || ಪ ||

ಆನಂದಾಮೃತವಾರಿಧಿ ಖೇಲ
ಅಲಘು ಪರಾಕ್ರಮ ಅನುಪಮಶೀಲ
ಶ್ರೀನಂದಾತ್ಮಜ ಶ್ರಿತಜನಪಾಲ
ಶ್ರೀಕರಕಿಸಲಯ ಲಾಲನಲೋಲ || ೧ ||

ಪಾಟಿತ ಸುರರಿಪು ಪಾದಪವೃಂದ
ಪಾವನಚರಿತ ಪರಾಮೃತಕಂದ
ನಾಟ್ಯರಸೋತ್ಕಟ ನಾನಾಭರಣ
ನಾರಾಯಣತೀರ್ಥ ವಂದಿತಚರಣ || ೨ ||