ಗುರುವಾರ ಬಂತಮ್ಮ

ರಚನೆಕಾರ: ಚಿ ಉದಯಶಂಕರ್

ವರ್ಗ: ರಾಘವೇಂದ್ರ ಸ್ವಾಮಿ

ಗುರುವಾರ ಬಂತಮ್ಮ
ಗುರುರಾಯರ ನೆನೆಯಮ್ಮ
ಸ್ಮರಣೆ ಮಾತ್ರದಲಿ ಕ್ಲೇಶ ಕಳೆದು ಸದ್ಗತಿಯ ಕೊಡುವನಮ್ಮ ||

ವಾರ ಬಂತಮ್ಮ ಗುರುವಾರ ಬಂತಮ್ಮ
ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ || ಪ ||

ಯೋಗಿ ಬರುವನಮ್ಮ ಶುಭ ಯೋಗ ಬರುವುದಮ್ಮ
ರಾಘವೇಂದ್ರ ಗುರುರಾಯ ಬಂದು ಭವರೋಗ ಕಳೆವನಮ್ಮ || ೧ ||

ಮನವ ತೊಳೆಯಿರಮ್ಮ ಭಕ್ತಿಯ ಮನೆಯ ಹಾಕಿರಮ್ಮ
ಧ್ಯಾನದಿಂದ ಕರೆದಾಗ ಬಂದು ಒಳಗಣ್ಣ ತೆರೆವನಮ್ಮ || ೨ ||

ಕೋಪ ಅರಿಯನಮ್ಮ ಯಾರನು ದೂರ ತಳ್ಳನಮ್ಮ
ಪ್ರೀತಿ ಮಾತಿಗೆ ಸೋತು ಬರುವ ಮಗುವಂತೆ ಕಾಣಿರಮ್ಮ || ೩ ||

ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ
ಹನುಮನಿದ್ದೆಡೆ ರಾಮನಿದ್ದು ನಿಜ ಮುಕ್ತಿ ಕೊಡುವನಮ್ಮ || ೪ ||