ಹೇಗೆ ಅರ್ಚಿಸಲಿ ಹೇಗೆ ಮೆಚ್ಚಿಸಲಿ

ರಚನೆಕಾರ: ಆರ್ ಕೆ ಪದ್ಮನಾಭ

ಗಾಯನ: ವಿಜಯ ಭಟ್

ವರ್ಗ: ಗುರು ಕೀರ್ತನೆ

ಹೇಗೆ ಅರ್ಚಿಸಲಿ ಹೇಗೆ ಮೆಚ್ಚಿಸಲಿ
ಹೇಗೆ ಪ್ರಾರ್ಥಿಸಲಿ ಗುರುವೇ ಸದ್ಗುರುವೇ || ಪ ||

ಜ್ಞಾನ ಸಂಪತ್ತಿಲ್ಲ ಗಾನದಲಿ ಗುಣವಿಲ್ಲ |
ಮಾತಿನಲಿ ಮಂದ್ರವಿಲ್ಲ ತತ್ವದಲಿ ತಾರವಿಲ್ಲ || ೧ ||

ಸ್ವರ ಷಡ್ಜಕೆ ಎಂದೂ ನೆಮ್ಮದಿ ಕೊಡಲಿಲ್ಲ |
ಸ್ವರ ಪಂಚಮದಂತೆ ಸ್ಥಿರವಿಲ್ಲ ಚಿಂತನೆಯು |
ರಾಗಾಲಾಪದಂತೆ ದಿವ್ಯ ರೂಪವಿಲ್ಲ |
ರೆಕ್ಕೆಯಿಲ್ಲದ ಪಕ್ಷಿ ಪದಮನಾಭ ದಾಸ ನಾ || ೨ ||