ಹೂ ಬೇಕೇ ಪರಿಮಳದ
ರಚನೆಕಾರ: ವಿದ್ಯಾಪ್ರಸನ್ನ ತೀರ್ಥರು
ವರ್ಗ: ಶ್ರೀಕೃಷ್ಣ
ಹೂ ಬೇಕೇ ಪರಿಮಳದ
ಪರಮ ಪುರುಷ ನಮ್ಮ ಕೃಷ್ಣನ ತೋಟದ
ಹೂ ಬೇಕೇ ಪರಿಮಳದ || ಪ ||
ದಾರದಿ ಕಟ್ಟಿಲ್ಲ ಮಾರು ಹಾಕುವುದಲ್ಲ
ಕೇರಿ ಕೇರಿಗಳಲ್ಲಿ ಮಾರುವುದಲ್ಲ
ಭೂರಿ ಭಕುತಿಯೆಂಬ ಭಾರಿಯ ಬೆಳಗಿದ
ಮಾರೆಂದು ಪೇಳಿದ ಶೌರಿಯ ಸೊಬಗಿನ || ೧ ||
ರಂಗು ರಂಗುಗಳಿಂದ ಕಂಗಳಿಸುವ ಸ್ವಚ್ಛ
ಬಂಗಾರದ ಛವಿ ಭಂಗಿಸುವ
ಶೃಂಗಾರಸಿಂಧು ಪ್ರಸನ್ನ ಶ್ರೀಮಾಧವನ
ಅಂಗ್ರಿಯ ಸಂಗದಿ ಮಂಗಳಕರವಾದ || ೨ ||
ಪರಮ ಪುರುಷ ನಮ್ಮ ಕೃಷ್ಣನ ತೋಟದ
ಹೂ ಬೇಕೇ ಪರಿಮಳದ || ಪ ||
ದಾರದಿ ಕಟ್ಟಿಲ್ಲ ಮಾರು ಹಾಕುವುದಲ್ಲ
ಕೇರಿ ಕೇರಿಗಳಲ್ಲಿ ಮಾರುವುದಲ್ಲ
ಭೂರಿ ಭಕುತಿಯೆಂಬ ಭಾರಿಯ ಬೆಳಗಿದ
ಮಾರೆಂದು ಪೇಳಿದ ಶೌರಿಯ ಸೊಬಗಿನ || ೧ ||
ರಂಗು ರಂಗುಗಳಿಂದ ಕಂಗಳಿಸುವ ಸ್ವಚ್ಛ
ಬಂಗಾರದ ಛವಿ ಭಂಗಿಸುವ
ಶೃಂಗಾರಸಿಂಧು ಪ್ರಸನ್ನ ಶ್ರೀಮಾಧವನ
ಅಂಗ್ರಿಯ ಸಂಗದಿ ಮಂಗಳಕರವಾದ || ೨ ||