ಇದಿರದಾವನು ನಿನಗೀ ಧರೆಯೊಳು
ರಚನೆಕಾರ: ಶ್ರೀಪಾದರಾಜರು
ವರ್ಗ: ಗುರು ಕೀರ್ತನೆ
ಇದಿರದಾವನು ನಿನಗೀ ಧರೆಯೊಳು
ಪದುಮನಾಭನ ದಾಸ ಪರಮೋಲ್ಲಾಸಾ || ಪ ||
ವಾದಿತಿಮಿರಮಾರ್ತಾಂಡನೆಂದೆನಿಸಿದ
ವಾದಿಶರಭಭೇರುಂಡ ವ್ಯಾಸರಾಯಾ || ೧ ||
ಯತಿಗಳೊಳಗೆ ನಿಮ್ಮಂದದದವರುಗಳ
ಪ್ರತಿಗಾಣೆನು ಈ ಕ್ಷಿತಿಯೊಳು ಯತಿರಾಯಾ || ೨ ||
ಹಮ್ಮನಳಿದು ಶ್ರೀಪತಿ ರಂಗವಿಠಲನ್ನ
ಸುಮ್ಮಾನದಿಂ ಸೇವಿಪ ವ್ಯಾಸಮುನಿರಾಯಾ || ೩ ||
ಪದುಮನಾಭನ ದಾಸ ಪರಮೋಲ್ಲಾಸಾ || ಪ ||
ವಾದಿತಿಮಿರಮಾರ್ತಾಂಡನೆಂದೆನಿಸಿದ
ವಾದಿಶರಭಭೇರುಂಡ ವ್ಯಾಸರಾಯಾ || ೧ ||
ಯತಿಗಳೊಳಗೆ ನಿಮ್ಮಂದದದವರುಗಳ
ಪ್ರತಿಗಾಣೆನು ಈ ಕ್ಷಿತಿಯೊಳು ಯತಿರಾಯಾ || ೨ ||
ಹಮ್ಮನಳಿದು ಶ್ರೀಪತಿ ರಂಗವಿಠಲನ್ನ
ಸುಮ್ಮಾನದಿಂ ಸೇವಿಪ ವ್ಯಾಸಮುನಿರಾಯಾ || ೩ ||