ಇನ್ನಿವನು ಈಗ
ರಚನೆಕಾರ: ಶ್ರೀಪಾದರಾಜರು
ವರ್ಗ: ಶ್ರೀಕೃಷ್ಣ
ಇನ್ನಿವನು ಈಗ ಬರಲಿದಕೆ ಬಗೆಯೇನು
ಚೆನ್ನಾಗಿ ಪೇಳೆ ರಮಣಿ || ಪ ||
ಮನ್ನಿಸಿ ಮಮತೆಯಲಿ ಮನವ ಸೆಳೆಕೊಂಡೊಯ್ದ
ಅನ್ಯರನು ಕೂಡುವನೆ ಕೆಳದಿ ಕೆಳದಿ || ಅ.ಪ. ||
ಬಣ್ಣದ ಗಿಣಿ ಬರೆದ ಸಣ್ಣ ಕುಪ್ಪಸವುಳ್ಳ
ಚಿನ್ನದ ಶ್ರೀರೇಖೆ ಸೀರೆ
ಬಿನ್ನಣವುಳ್ಳ ಬಿಳಿಯೆಲೆ ಅಡಿಕೆ ಕೆನೆಸುಣ್ಣ
ಕರ್ಪೂರ ಕಾಚಿನುಂಡೆ
ಕಣ್ಣಿಗಿಂಪಾದ ಕಡುಚೆಲ್ವ ಮಲ್ಲಿಗೆ ಮೊಗ್ಗೆ
ಉನ್ನತವಾದ ದಂಡೆ
ಇನ್ನು ಈ ಪರಿಮಳವು ಬಗೆಬಗೆಯ ಆಭರಣ
ರನ್ನ ಕೆತ್ತಿಸಿದ ಗೋಡೆ
ಮುನ್ನ ಸಿಂಗರ ಮಾಡಿ ಎದೆ ಹಿಡಿದು ಬಿಗಿಯಪ್ಪಿ
ನಿನ್ನೆ ಈ ವೇಳೆ ಕೂಡಿದ ದೃಢದೆ || ೧ ||
ಈಗಾಗ ಬಾಹನೆಂತಿರುವೆ ತಾನೂರಿದ್ದ
ಉಗುರು ಗುರುತನು ನೋಡುತ
ಸೋಗೆಗಣ್ಣಿನ ಕಾಡಿಗೆಯ ಕಲಕಿದನೆಂದು
ಬೇಗ ನಟನೆಯ ಮಾಡುತ
ರಾಗದಿಂದಲಿ ರವಿಕೆನೆರಿಯನು ಬದಲುಟ್ಟು
ಭೋಗಕೆ ಅನುವಾಗುತ
ಹೀಗೆ ಸಿಂಗರಿಸಿಕೊಂಡಿಷ್ಟು ಹೊತ್ತನು ಕಳೆದೆ
ಹೇಗೆ ಸೈರಿಪೆ ಕೂಡದೆ ಮುಂದೆ || ೨ ||
ಇಂದಲ್ಲದಿರೆ ನಾಳೆ ಬಹನೆಂದು ಇದ್ದರೆ
ಕಂದರ್ಪ ಕಾಡುತಿಹನೆ
ತಂದು ತೋರಿಸು ತನ್ನ ತಂದೆಯನೆಂದು ಪೂ-
ವಿಂದ ಬಾಣವ ಎಸೆವನೆ
ಇಂದುಬಿಂಬವು ಮಂದಮಾರುತವು ಸುಮದ ಮಳೆ-
ಯಿಂದ ಸೆಕೆಗಾನಾರೆನೆ
ಒಂದು ನಿಮಿಷದಲಿ ಶ್ರೀರಂಗವಿಠಲನನ್ನು
ಹೊಂದಿಸೆನ್ನಗಲದಂತೆ ಕಾಂತೆ || ೩ ||
ಚೆನ್ನಾಗಿ ಪೇಳೆ ರಮಣಿ || ಪ ||
ಮನ್ನಿಸಿ ಮಮತೆಯಲಿ ಮನವ ಸೆಳೆಕೊಂಡೊಯ್ದ
ಅನ್ಯರನು ಕೂಡುವನೆ ಕೆಳದಿ ಕೆಳದಿ || ಅ.ಪ. ||
ಬಣ್ಣದ ಗಿಣಿ ಬರೆದ ಸಣ್ಣ ಕುಪ್ಪಸವುಳ್ಳ
ಚಿನ್ನದ ಶ್ರೀರೇಖೆ ಸೀರೆ
ಬಿನ್ನಣವುಳ್ಳ ಬಿಳಿಯೆಲೆ ಅಡಿಕೆ ಕೆನೆಸುಣ್ಣ
ಕರ್ಪೂರ ಕಾಚಿನುಂಡೆ
ಕಣ್ಣಿಗಿಂಪಾದ ಕಡುಚೆಲ್ವ ಮಲ್ಲಿಗೆ ಮೊಗ್ಗೆ
ಉನ್ನತವಾದ ದಂಡೆ
ಇನ್ನು ಈ ಪರಿಮಳವು ಬಗೆಬಗೆಯ ಆಭರಣ
ರನ್ನ ಕೆತ್ತಿಸಿದ ಗೋಡೆ
ಮುನ್ನ ಸಿಂಗರ ಮಾಡಿ ಎದೆ ಹಿಡಿದು ಬಿಗಿಯಪ್ಪಿ
ನಿನ್ನೆ ಈ ವೇಳೆ ಕೂಡಿದ ದೃಢದೆ || ೧ ||
ಈಗಾಗ ಬಾಹನೆಂತಿರುವೆ ತಾನೂರಿದ್ದ
ಉಗುರು ಗುರುತನು ನೋಡುತ
ಸೋಗೆಗಣ್ಣಿನ ಕಾಡಿಗೆಯ ಕಲಕಿದನೆಂದು
ಬೇಗ ನಟನೆಯ ಮಾಡುತ
ರಾಗದಿಂದಲಿ ರವಿಕೆನೆರಿಯನು ಬದಲುಟ್ಟು
ಭೋಗಕೆ ಅನುವಾಗುತ
ಹೀಗೆ ಸಿಂಗರಿಸಿಕೊಂಡಿಷ್ಟು ಹೊತ್ತನು ಕಳೆದೆ
ಹೇಗೆ ಸೈರಿಪೆ ಕೂಡದೆ ಮುಂದೆ || ೨ ||
ಇಂದಲ್ಲದಿರೆ ನಾಳೆ ಬಹನೆಂದು ಇದ್ದರೆ
ಕಂದರ್ಪ ಕಾಡುತಿಹನೆ
ತಂದು ತೋರಿಸು ತನ್ನ ತಂದೆಯನೆಂದು ಪೂ-
ವಿಂದ ಬಾಣವ ಎಸೆವನೆ
ಇಂದುಬಿಂಬವು ಮಂದಮಾರುತವು ಸುಮದ ಮಳೆ-
ಯಿಂದ ಸೆಕೆಗಾನಾರೆನೆ
ಒಂದು ನಿಮಿಷದಲಿ ಶ್ರೀರಂಗವಿಠಲನನ್ನು
ಹೊಂದಿಸೆನ್ನಗಲದಂತೆ ಕಾಂತೆ || ೩ ||