ಜಗದೋದ್ಧಾರನ
ರಚನೆಕಾರ: ಪುರಂದರದಾಸರು
ವರ್ಗ: ಶ್ರೀಕೃಷ್ಣ
ಜಗದೋದ್ಧಾರನ ಆಡಿಸಿದಳೆ ಯಶೋದಾ
ಜಗದೋದ್ಧಾರನ || ಪ ||
ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತ ರಂಗನ ಆಡಿಸಿದಳೆ ಯಶೋದೆ || ಅ.ಪ ||
ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳೆ ಯಶೋದೆ || ೧ ||
ಅಣೋರಣೀಯನ ಮಹತೋ ಮಹಿಮನ
ಅಪ್ರಮೇಯನ ಆಡಿಸಿದಳೆ ಯಶೋದಾ || ೨ ||
ಪರಮ ಪುರುಷನ ಪರವಾಸುದೇವನ
ಪುರಂದರ ವಿಠಲನ ಆಡಿಸಿದಳೆ ಯಶೋದಾ || ೩ ||
ಜಗದೋದ್ಧಾರನ || ಪ ||
ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತ ರಂಗನ ಆಡಿಸಿದಳೆ ಯಶೋದೆ || ಅ.ಪ ||
ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳೆ ಯಶೋದೆ || ೧ ||
ಅಣೋರಣೀಯನ ಮಹತೋ ಮಹಿಮನ
ಅಪ್ರಮೇಯನ ಆಡಿಸಿದಳೆ ಯಶೋದಾ || ೨ ||
ಪರಮ ಪುರುಷನ ಪರವಾಸುದೇವನ
ಪುರಂದರ ವಿಠಲನ ಆಡಿಸಿದಳೆ ಯಶೋದಾ || ೩ ||