ಕೈಲಾಸ ಶಂಕರ

ರಚನೆಕಾರ: ಅಜ್ಞಾತ

ಗಾಯನ: ಶ್ರೀನಿಧಿ ರಾವ್

ವರ್ಗ: ಈಶ್ವರ

ಕೈಲಾಸ ಶಂಕರ ಪಾರ್ವತಿ ಪರಮೇಶ್ವರ
ಪ್ರಳಯತಾಂಡವ ನೃತ್ಯ ಭಯಂಕರ
ಶ್ರೀಗೌರಿ ಶಂಕರ ಶ್ರೀ ಜಟಾಗಂಗಾಧರ
ಶ್ರೀ ನೀಲಕಂಠ ಋಷೀಂಧರ
ಕೈಲಾಸ ಶಂಕರ, ಶಂಕರ ಶಂಕರ || ಪ ||

ಗಂಗೆ ಯಮುನೆ ಸರಸ್ವತಿ
ತುಂಗಭದ್ರ ಗೋದಾವರಿ
ಚಂದ್ರಭಾಗ ನರ್ಮದಾ ಕಾವೇರಿ ಕೃಷ್ಣ
ನಿನ್ನ ಕಾಲಗರ್ಭದಲ್ಲಿ ಇರುವಾಗ
ವಿಶ್ವರೂಪದಲ್ಲಿ ಮೂರ್ತನಾಗು ಶಂಕರ || ೧ ||

ಓಂ ಗಣನಾಥಾಯ ಓಂ ನಮಃ ಶಿವಾಯ
ಓಂಕಾರ ನಾದಪ್ರಿಯ ಶಂಕರ
ನಿನ್ನ ಪಂಚಾಕ್ಷರಿ ಧ್ಯಾನಮಾಲ್ಪ ನರರಿಗೆ
ಸುಜ್ಞಾನವನ್ನು ಕರುಣಿಸೋ ಶಂಕರ || ೨ ||

ಮರಣಕಾಲದಲ್ಲಿ ನಿನ್ನ ಸ್ಮರಣೆ ಮರೆವೆನೇನು
ಮರೆಯಾದನಂತ ಜ್ಞಾನ ನೀಡು ಶಂಕರ
ಮಾಯಾಮಯವಾದ ಈ ಜಗದಲ್ಲಿ
ಜನ್ಮ ಸಾರ್ಥಕವ ಮಾಡಯ್ಯ ಶಂಕರ || ೩ ||