ಕಾಪಾಡು ಶ್ರೀ ಸತ್ಯನಾರಾಯಣ

ರಚನೆಕಾರ: ವಿಜಯ ನಾರಸಿಂಹ

ವರ್ಗ: ವಿಷ್ಣು

ಕಾಪಾಡು ಶ್ರೀ ಸತ್ಯನಾರಾಯಣ |
ನಾರಾಯಣ ಸತ್ಯನಾರಾಯಣ || ಪ ||

ನಾರಾಯಣ ಲಕ್ಷ್ಮಿನಾರಾಯಣ |
ಪನ್ನಗ ಶಯನ ಪಾವನ ಚರಣ |
ನಂಬಿದೆ ನಿನ್ನಾ |
ಕಾಪಾಡು ಶ್ರೀ ಸತ್ಯನಾರಾಯಣ || ೧ ||

ಮನವೆಂಬ ಮಂಟಪ ಬೆಳಕಾಗಿದೆ |
ಹರಿನಾಮದ ಮಂತ್ರವೇ ತುಂಬಿದೆ |
ಎಂದೆಂದು ಸ್ಥಿರವಾಗಿ ನೀನಿಲ್ಲಿರೊ |
ನಮ್ಮಲ್ಲಿ ಒಂದಾಗಿ ಉಸಿರಾಗಿರು || ೨ ||

ನನಗಾಗಿ ಏನನ್ನು ನಾ ಬೇಡೆನು |
ಧನಕನಕ ಬೇಕೆಂದು ನಾ ಕೇಳೆನು |
ಈ ಮನೆಯು ನೀನಿರುವ ಗುಡಿಯಾಗಲಿ |
ಸುಖ ಶಾಂತಿ ನೆಮ್ಮದಿಯ ನೆಲೆಯಾಗಲಿ || ೩ ||

ಕಣ್ಣೀರ ಅಭಿಷೇಕ ನಾ ಮಾಡಿದೆ |
ಕರುಣಾಳು ನೀ ಎನ್ನ ಕಾಪಾಡಿದೆ |
ಬರಿದಾದ ಮಡಿಲನ್ನು ನೀ ತುಂಬಿದೆ |
ನಾ ಕಾಣದಾನಂದ ನೀ ನೀಡಿದೆ || ೪ ||