ಕರವ ಮುಗಿದ ಮುಖ್ಯಪ್ರಾಣ

ರಚನೆಕಾರ: ಪುರಂದರದಾಸರು

ಗಾಯನ: ಸೌಜನ್ಯ

ವರ್ಗ: ಹನುಮಂತ

ಕರವ ಮುಗಿದ ಮುಖ್ಯಪ್ರಾಣ || ಪ ||

ಕರವ ಮುಗಿದ ಶ್ರೀ ಹರಿಯೇ ಎದುರಾಗಿ |
ದುರುಳರ ಸದೆದು ಸಜ್ಜನರ ಪೊರೆಯೆಂದು || ಅ.ಪ ||

ಜೀವೇಶರೈಕ್ಯವು ಜಗತ್ತು ಮಿಥ್ಯವೆಂದು |
ಈ ವಿಧ ಪೇಳುವ ಮಾಯಿಗಳಳಿಯೆಂದು || ೧ ||

ಇಲ್ಲಿ ಮಾತ್ರ ಭೇದ, ಅಲ್ಲಿ ಒಂದೇ ಎಂಬ |
ಕ್ಷುಲ್ಲಕರನು ಪಿಡಿದು ಹಲ್ಲು ಮುರಿಯೆಂದು || ೨ ||

ತಾರತಮ್ಯ ಪಂಚಭೇದ ಸತ್ಯವೆಂಬ |
ಮಾರುತಿಮತ ಪೊಂದಿದವರನು ಸಲಹೆಂದು || ೩ ||

ಪರಿಪರಿ ಭಕ್ತರ ಹೃದಯದಲ್ಲಿ ನಿಂದು |
ನಿರತ ಮಾಡುವ ಕರ್ಮ ಹರಿಗೆ ಅರ್ಪಿತವೆಂದು || ೪ ||

ಹರಿ ಮಾಡೋ ವ್ಯಾಪಾರ ಬಲ್ಲ ಕಾರಣನಾಗಿ |
ಪುರಂದರವಿಠಲನ ಚರಣಕ್ಕೆರಗಿ ನಿಂದು || ೫ ||