ಕೊಡು ಬೇಗ ದಿವ್ಯಮತಿ
ರಚನೆಕಾರ: ಪುರಂದರದಾಸರು
ಗಾಯನ: ಶ್ರೀನಿಧಿ ರಾವ್
ವರ್ಗ: ಸರಸ್ವತಿ
ಕೊಡು ಬೇಗ ದಿವ್ಯಮತಿ ಸರಸ್ವತಿ || ಪ ||
ಮೃಡ ಹರಿಹರ ಮುಖರೊಡೆಯಳೆ ನಿನ್ನಯ
ಅಡಿಗೆರಗುವೆ ಅಮ್ಮ ಬ್ರಹ್ಮನ ರಾಣಿ || ಅ.ಪ ||
ಇಂದಿರಾ ರಮಣನ ಹಿರಿಯ ಸೊಸೆಯು ನೀನು
ಬಂದೆನ್ನ ವದನದಿ ನಿಂದು ನಾಮವ ನುಡಿಸೆ || ೧ ||
ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದರಾಣಿ
ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ || ೨ ||
ಪತಿತ ಪಾವನೆ ನೀ ಗತಿಯೆಂದು ನಂಬಿದೆ
ಮತಿಗೊಟ್ಟು ಪುರಂದರ ವಿಠಲನ ತೋರೆ || ೩ ||
ಮೃಡ ಹರಿಹರ ಮುಖರೊಡೆಯಳೆ ನಿನ್ನಯ
ಅಡಿಗೆರಗುವೆ ಅಮ್ಮ ಬ್ರಹ್ಮನ ರಾಣಿ || ಅ.ಪ ||
ಇಂದಿರಾ ರಮಣನ ಹಿರಿಯ ಸೊಸೆಯು ನೀನು
ಬಂದೆನ್ನ ವದನದಿ ನಿಂದು ನಾಮವ ನುಡಿಸೆ || ೧ ||
ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದರಾಣಿ
ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ || ೨ ||
ಪತಿತ ಪಾವನೆ ನೀ ಗತಿಯೆಂದು ನಂಬಿದೆ
ಮತಿಗೊಟ್ಟು ಪುರಂದರ ವಿಠಲನ ತೋರೆ || ೩ ||