ಕೃಷ್ಣ ಬಾರೊ ರಂಗ ಬಾರೋ
ರಚನೆಕಾರ: ಪುರಂದರದಾಸರು
ಗಾಯನ: ಅಪೂರ್ವ ಶ್ರೀಕುಮಾರ್
ವರ್ಗ: ಶ್ರೀಕೃಷ್ಣ
ಕೃಷ್ಣ ಬಾರೊ ರಂಗ ಬಾರೋ
ಕೃಷ್ಣಯ್ಯ ನೀ ಬಾರಯ್ಯ || ಪ ||
ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆನಾದಗಳಿಂದ || ಅ.ಪ. ||
ಮನ್ಮಥಜನಕನೆ ಬೇಗನೆ ಬಾರೊ |
ಕಮಲಾಪತಿ ನೀ ಬಾರೊ |
ಅಮಿತಪರಾಕ್ರಮ ಶಂಕರ ಬಾರೊ |
ಕಮನೀಯ ಗಾತ್ರನೆ ಬಾರಯ್ಯ ದೊರೆಯೆ || ೧ ||
ಸುರುಳು ಕೇಶಗಳ ಒಲಿವ ಅಂದ |
ಭರದ ಕಸ್ತೂರಿ ತಿಲಕದ ಚಂದ |
ಶಿರದಿ ಒಪ್ಪುವ ನವಿಲುಕಣ್ಗಳಿಂದ |
ತರತರದ ಆಭರಣಗಳ ಧರಿಸಿ ನೀ ಬಾರೊ || ೨ ||
ಹಾಲುಬೆಣ್ಣೆಗಳ ಕೈಯಲ್ಲಿ ಕೊಡುವೆ |
ಮೇಲಾದ ಭಕ್ಷ್ಯಗಳ ಮುಚ್ಚಿಟ್ಟು ತರುವೆ |
ಜಾಲ ಮಾಡದೆ ನೀ ಬಾರಯ್ಯ ಮರಿಯೆ |
ಬಾಲ ಎನ್ನ ತಂದೆ ಪುರಂದರವಿಠಲ || ೩ ||
ಕೃಷ್ಣಯ್ಯ ನೀ ಬಾರಯ್ಯ || ಪ ||
ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆನಾದಗಳಿಂದ || ಅ.ಪ. ||
ಮನ್ಮಥಜನಕನೆ ಬೇಗನೆ ಬಾರೊ |
ಕಮಲಾಪತಿ ನೀ ಬಾರೊ |
ಅಮಿತಪರಾಕ್ರಮ ಶಂಕರ ಬಾರೊ |
ಕಮನೀಯ ಗಾತ್ರನೆ ಬಾರಯ್ಯ ದೊರೆಯೆ || ೧ ||
ಸುರುಳು ಕೇಶಗಳ ಒಲಿವ ಅಂದ |
ಭರದ ಕಸ್ತೂರಿ ತಿಲಕದ ಚಂದ |
ಶಿರದಿ ಒಪ್ಪುವ ನವಿಲುಕಣ್ಗಳಿಂದ |
ತರತರದ ಆಭರಣಗಳ ಧರಿಸಿ ನೀ ಬಾರೊ || ೨ ||
ಹಾಲುಬೆಣ್ಣೆಗಳ ಕೈಯಲ್ಲಿ ಕೊಡುವೆ |
ಮೇಲಾದ ಭಕ್ಷ್ಯಗಳ ಮುಚ್ಚಿಟ್ಟು ತರುವೆ |
ಜಾಲ ಮಾಡದೆ ನೀ ಬಾರಯ್ಯ ಮರಿಯೆ |
ಬಾಲ ಎನ್ನ ತಂದೆ ಪುರಂದರವಿಠಲ || ೩ ||