ಲಾಲಿ ಮುನಿವಂದ್ಯ
ರಚನೆಕಾರ: ಶ್ರೀಪಾದರಾಜರು
ವರ್ಗ: ಶ್ರೀಕೃಷ್ಣ
ಲಾಲಿ ಮುನಿವಂದ್ಯ ಲಾಲಿ ಜಾನಕಿ-ರಮಣ ಶ್ರೀರಾಮ ಲಾಲಿ || ಅ.ಪ. ||
ಕನಕರತ್ನಗಳಲ್ಲಿ ಕಾಲ್ಗಳನೆ ಹೂಡಿ
ನಾಲ್ಕು ವೇದಗಳನ್ನು ಸರಪಣಿಯ ಮಾಡಿ
ಅನೇಕ ಭೂಮಂಡಲವ ಹಗೆಯನು ಮಾಡಿ
ಶ್ರೀಕಾಂತನುಯ್ಯಾಲೆಯನು ವಿರಚಿಸಿದರು || ೧ ||
ಆಶ್ಚರ್ಯಜನಕವಾಗಿ ನಿರ್ಮಿಸಿದ
ಪಚ್ಚೆಯ ತೊಟ್ಟಿಲಲ್ಲಿ
ಅಚ್ಚುತಾನಂತನಿರಲು ತೂಗಿದರು
ಮತ್ಸ್ಯಾವತಾರ ಹರಿಯ || ೨ ||
ಧರ್ಮಸ್ಥಾಪಕನು ಎಂದು ನಿರವಧಿಕ
ನಿರ್ಮಲ ಚರಿತ್ರನೆಂದು
ಮರ್ಮ ಕರ್ಮಗಳ ಪಾಡಿ ತೂಗಿದರು
ಕೂರ್ಮಾವತಾರ ಹರಿಯ || ೩ ||
ಸರಸಿಜಾಕ್ಷಿಯರೆಲ್ಲರು ಜನವಶೀಕರ ದಿವ್ಯರೂಪನೆಂದು
ಪರಮ ಹರುಷದಲಿ ಪಾಡಿ ತೂಗಿದರು
ವರಾಹಾವತಾರ ಹರಿಯ || ೪ ||
ಕರಿಕುಂಭಗಳ ಪೋಲುವ ಕುಚದಲ್ಲಿ
ಹಾರ ಪದಕವು ಹೊಳೆಯಲು
ವರ ವರ್ಣಿನಿಯರು ಪಾಡಿ ತೂಗಿದರು
ನರಸಿಂಹಾವತಾರ ಹರಿಯ || ೫ ||
ಭಾನುಮಣಿಯರೆಲ್ಲರು ಯದುವಂಶ
ಸೋಮನಿವನೆಂದು ಪೊಗಳಿ
ನೇಮದಿಂದಲಿ ಪಾಡಿ ತೂಗಿದರು
ವಾಮನಾವತಾರ ಹರಿಯ || ೬ ||
ಸಾಮಜವರದನೆಂದು ಅತುಳ ಭೃಗು
ರಾಮಾವತಾರವೆಂದು
ಶ್ರೀಮದಾನಂದ ಹರಿಯ ತೂಗಿದರು
ಪ್ರೇಮಾತಿರೇಕದಿಂದ || ೭ ||
ಕಾಮನಿಗೆ ಕಾಮನೆಂದು ಸುರ
ಸಾರ್ವಭೌಮ ಗುಣಧಾಮನೆಂದು
ವಾಮನೇತ್ರೆಯರು ಪಾಡಿ ತೂಗಿದರು
ರಾಮಾವತಾರ ಹರಿಯ || ೮ ||
ಸೃಷ್ಟಿಯ ಕರ್ತನೆಂದು ಜಗದೊಳಗೆ
ಶಿಷ್ಟ ಸಂತುಷ್ಟನೆಂದು ದೃಷ್ಟಾಂತ
ರಹಿತನೆಂದು ತೂಗಿದರು
ಕೃಷ್ಣಾವತಾರ ಹರಿಯ || ೯ ||
ವೃದ್ಧನಾರಿಯರೆಲ್ಲರು ಜಗದೊಳಗೆ
ಪ್ರಸಿದ್ಧನಿವನೆಂದು ಪೊಗಳಿ
ಬದ್ಧಾನುರಾಗದಿಂದ ತೂಗಿದರು
ಬೌದ್ಧಾವತಾರ ಹರಿಯ || ೧೦ ||
ಥಳಥಳಾತ್ಕಾರದಿಂದ ರಂಜಿಸುವ
ಮಲಯಜಲೇಪದಿಂದ
ಜಲಗಂಧಿಯರು ಪಾಡಿ ತೂಗಿದರು
ಕಲ್ಕ್ಯಾವತಾರ ಹರಿಯ || ೧೧ ||
ಕನಕಮಯ ಖಚಿತವಾದ ತಲ್ಪದಲಿ
ವನಜಭವ ಜನಕನಿರಲು
ವನಜನಾಭನ್ನ ಪಾಡಿ ತೂಗಿದರು
ವನಿತಾಮಣಿಯರೆಲ್ಲರು || ೧೨ ||
ಪದ್ಮರಾಗವ ಪೋಲುವ ಹರಿಪಾದ
ಪದ್ಮವನು ತಮ್ಮ ಹೃದಯಪದ್ಮದಲಿ
ನಿಲಿಸಿ ಪಾಡಿ ತೂಗಿದರು
ಪದ್ಮಿನೀ ಭಾಮಿನಿಯರು || ೧೩ ||
ಹಸ್ತಭೂಷಣ ಮೆರೆಯಲು ದಿವ್ಯತರ
ಹಸ್ತಲಾಘವಗಳಿಂದ
ಹಸ್ತಗಳ ಪಿಡಿದುಕೊಂಡು ತೂಗಿದರು
ಹಸ್ತಿನೀ ಭಾಮಿನಿಯರು || ೧೪ ||
ಮತ್ತಗಜಗಾಮಿನಿಯರು ದಿವ್ಯತರ
ಚಿತ್ರವಸ್ತ್ರಗಳನುಟ್ಟು ಚಿತ್ತ
ಸಂತೋಷದಿಂದ ತೂಗಿದರು
ಚಿತ್ತಿನೀ ಭಾಮಿನಿಯರು || ೧೫ ||
ಕಂಕಣಧ್ವನಿಗಳಿಂದ ರಂಜಿಸುವ
ಕಿಂಕಿಣೀಸ್ವರಗಳಿಂದ
ಪಂಕಜಾಕ್ಷಿಯರು ಪಾಡಿ ತೂಗಿದರು
ಶಂಕಿನೀ ಭಾಮಿನಿಯರು || ೧೬ ||
ಚೊಕ್ಕ ಕಸ್ತೂರಿ ಪಂಕದಿಂ ರಂಜಿಸುವ
ಮಕರಿಕಾಪತ್ರ ಬರೆದುಲಿ
ಕುಚಸ್ತನಿಯರು ಪಾಡಿ ತೂಗಿದರು
ಅಕಳಂಕಚರಿತ ಹರಿಯ || ೧೭ ||
ಆನಂದಸದನದೊಳಗೆ ಗೋಪಿಯರು
ಆ ನಂದಸುತನ ಕಂಡು
ಆನಂದ ಭರಿತರಾಗಿ ತೂಗಿದರು
ಆನಂದ ಭೈರವಿಯಿಂದ || ೧೮ ||
ದೇವಾಧಿದೇವನೆಂದು ಈ ಶಿಶುವು
ಭಾವನಾತೀತನೆಂದು
ದೇವ ಗಂಧರ್ವರ್ಪಾಡಿ ತೂಗಿದರು
ದೇವ ಗಾಂಧಾರದಿಂದ || ೧೯ ||
ನೀಲಘನ ನೀಲ ಜೋ ಜೋ
ಕರುಣಾಲವಾಲ ಶ್ರೀಕೃಷ್ಣ ಜೋ ಜೋ
ಲೀಲಾವತಾರ ಜೋ ಜೋ ಪರಮಾತ್ಮ
ಬಾಲಗೋಪಾಲ ಜೋ ಜೋ || ೨೦ ||
ಇಂದುಧರಮಿತ್ರ ಜೋ ಜೋ ಶ್ರೀಕೃಷ್ಣ
ಇಂದು ರವಿ ನೇತ್ರ ಜೋ ಜೋ
ಇಂದುಕುಲ ಪುತ್ರ ಜೋ ಜೋ ಪರಮಾತ್ಮ
ಇಂದಿರಾರಮಣ ಜೋ ಜೋ || ೨೧ ||
ತುಂಗ ಭವಭಂಗ ಜೋ ಜೋ ಪರಮಾತ್ಮ
ರಂಗ ಕೃಪಾಂಗ ಜೋ ಜೋ
ಮಂಗಳಾಪಾಂಗ ಜೋ ಜೋ ಮೋಹನಾಂಗ
ರಂಗವಿಠಲನೆ ಜೋ ಜೋ || ೨೨ ||
ಕನಕರತ್ನಗಳಲ್ಲಿ ಕಾಲ್ಗಳನೆ ಹೂಡಿ
ನಾಲ್ಕು ವೇದಗಳನ್ನು ಸರಪಣಿಯ ಮಾಡಿ
ಅನೇಕ ಭೂಮಂಡಲವ ಹಗೆಯನು ಮಾಡಿ
ಶ್ರೀಕಾಂತನುಯ್ಯಾಲೆಯನು ವಿರಚಿಸಿದರು || ೧ ||
ಆಶ್ಚರ್ಯಜನಕವಾಗಿ ನಿರ್ಮಿಸಿದ
ಪಚ್ಚೆಯ ತೊಟ್ಟಿಲಲ್ಲಿ
ಅಚ್ಚುತಾನಂತನಿರಲು ತೂಗಿದರು
ಮತ್ಸ್ಯಾವತಾರ ಹರಿಯ || ೨ ||
ಧರ್ಮಸ್ಥಾಪಕನು ಎಂದು ನಿರವಧಿಕ
ನಿರ್ಮಲ ಚರಿತ್ರನೆಂದು
ಮರ್ಮ ಕರ್ಮಗಳ ಪಾಡಿ ತೂಗಿದರು
ಕೂರ್ಮಾವತಾರ ಹರಿಯ || ೩ ||
ಸರಸಿಜಾಕ್ಷಿಯರೆಲ್ಲರು ಜನವಶೀಕರ ದಿವ್ಯರೂಪನೆಂದು
ಪರಮ ಹರುಷದಲಿ ಪಾಡಿ ತೂಗಿದರು
ವರಾಹಾವತಾರ ಹರಿಯ || ೪ ||
ಕರಿಕುಂಭಗಳ ಪೋಲುವ ಕುಚದಲ್ಲಿ
ಹಾರ ಪದಕವು ಹೊಳೆಯಲು
ವರ ವರ್ಣಿನಿಯರು ಪಾಡಿ ತೂಗಿದರು
ನರಸಿಂಹಾವತಾರ ಹರಿಯ || ೫ ||
ಭಾನುಮಣಿಯರೆಲ್ಲರು ಯದುವಂಶ
ಸೋಮನಿವನೆಂದು ಪೊಗಳಿ
ನೇಮದಿಂದಲಿ ಪಾಡಿ ತೂಗಿದರು
ವಾಮನಾವತಾರ ಹರಿಯ || ೬ ||
ಸಾಮಜವರದನೆಂದು ಅತುಳ ಭೃಗು
ರಾಮಾವತಾರವೆಂದು
ಶ್ರೀಮದಾನಂದ ಹರಿಯ ತೂಗಿದರು
ಪ್ರೇಮಾತಿರೇಕದಿಂದ || ೭ ||
ಕಾಮನಿಗೆ ಕಾಮನೆಂದು ಸುರ
ಸಾರ್ವಭೌಮ ಗುಣಧಾಮನೆಂದು
ವಾಮನೇತ್ರೆಯರು ಪಾಡಿ ತೂಗಿದರು
ರಾಮಾವತಾರ ಹರಿಯ || ೮ ||
ಸೃಷ್ಟಿಯ ಕರ್ತನೆಂದು ಜಗದೊಳಗೆ
ಶಿಷ್ಟ ಸಂತುಷ್ಟನೆಂದು ದೃಷ್ಟಾಂತ
ರಹಿತನೆಂದು ತೂಗಿದರು
ಕೃಷ್ಣಾವತಾರ ಹರಿಯ || ೯ ||
ವೃದ್ಧನಾರಿಯರೆಲ್ಲರು ಜಗದೊಳಗೆ
ಪ್ರಸಿದ್ಧನಿವನೆಂದು ಪೊಗಳಿ
ಬದ್ಧಾನುರಾಗದಿಂದ ತೂಗಿದರು
ಬೌದ್ಧಾವತಾರ ಹರಿಯ || ೧೦ ||
ಥಳಥಳಾತ್ಕಾರದಿಂದ ರಂಜಿಸುವ
ಮಲಯಜಲೇಪದಿಂದ
ಜಲಗಂಧಿಯರು ಪಾಡಿ ತೂಗಿದರು
ಕಲ್ಕ್ಯಾವತಾರ ಹರಿಯ || ೧೧ ||
ಕನಕಮಯ ಖಚಿತವಾದ ತಲ್ಪದಲಿ
ವನಜಭವ ಜನಕನಿರಲು
ವನಜನಾಭನ್ನ ಪಾಡಿ ತೂಗಿದರು
ವನಿತಾಮಣಿಯರೆಲ್ಲರು || ೧೨ ||
ಪದ್ಮರಾಗವ ಪೋಲುವ ಹರಿಪಾದ
ಪದ್ಮವನು ತಮ್ಮ ಹೃದಯಪದ್ಮದಲಿ
ನಿಲಿಸಿ ಪಾಡಿ ತೂಗಿದರು
ಪದ್ಮಿನೀ ಭಾಮಿನಿಯರು || ೧೩ ||
ಹಸ್ತಭೂಷಣ ಮೆರೆಯಲು ದಿವ್ಯತರ
ಹಸ್ತಲಾಘವಗಳಿಂದ
ಹಸ್ತಗಳ ಪಿಡಿದುಕೊಂಡು ತೂಗಿದರು
ಹಸ್ತಿನೀ ಭಾಮಿನಿಯರು || ೧೪ ||
ಮತ್ತಗಜಗಾಮಿನಿಯರು ದಿವ್ಯತರ
ಚಿತ್ರವಸ್ತ್ರಗಳನುಟ್ಟು ಚಿತ್ತ
ಸಂತೋಷದಿಂದ ತೂಗಿದರು
ಚಿತ್ತಿನೀ ಭಾಮಿನಿಯರು || ೧೫ ||
ಕಂಕಣಧ್ವನಿಗಳಿಂದ ರಂಜಿಸುವ
ಕಿಂಕಿಣೀಸ್ವರಗಳಿಂದ
ಪಂಕಜಾಕ್ಷಿಯರು ಪಾಡಿ ತೂಗಿದರು
ಶಂಕಿನೀ ಭಾಮಿನಿಯರು || ೧೬ ||
ಚೊಕ್ಕ ಕಸ್ತೂರಿ ಪಂಕದಿಂ ರಂಜಿಸುವ
ಮಕರಿಕಾಪತ್ರ ಬರೆದುಲಿ
ಕುಚಸ್ತನಿಯರು ಪಾಡಿ ತೂಗಿದರು
ಅಕಳಂಕಚರಿತ ಹರಿಯ || ೧೭ ||
ಆನಂದಸದನದೊಳಗೆ ಗೋಪಿಯರು
ಆ ನಂದಸುತನ ಕಂಡು
ಆನಂದ ಭರಿತರಾಗಿ ತೂಗಿದರು
ಆನಂದ ಭೈರವಿಯಿಂದ || ೧೮ ||
ದೇವಾಧಿದೇವನೆಂದು ಈ ಶಿಶುವು
ಭಾವನಾತೀತನೆಂದು
ದೇವ ಗಂಧರ್ವರ್ಪಾಡಿ ತೂಗಿದರು
ದೇವ ಗಾಂಧಾರದಿಂದ || ೧೯ ||
ನೀಲಘನ ನೀಲ ಜೋ ಜೋ
ಕರುಣಾಲವಾಲ ಶ್ರೀಕೃಷ್ಣ ಜೋ ಜೋ
ಲೀಲಾವತಾರ ಜೋ ಜೋ ಪರಮಾತ್ಮ
ಬಾಲಗೋಪಾಲ ಜೋ ಜೋ || ೨೦ ||
ಇಂದುಧರಮಿತ್ರ ಜೋ ಜೋ ಶ್ರೀಕೃಷ್ಣ
ಇಂದು ರವಿ ನೇತ್ರ ಜೋ ಜೋ
ಇಂದುಕುಲ ಪುತ್ರ ಜೋ ಜೋ ಪರಮಾತ್ಮ
ಇಂದಿರಾರಮಣ ಜೋ ಜೋ || ೨೧ ||
ತುಂಗ ಭವಭಂಗ ಜೋ ಜೋ ಪರಮಾತ್ಮ
ರಂಗ ಕೃಪಾಂಗ ಜೋ ಜೋ
ಮಂಗಳಾಪಾಂಗ ಜೋ ಜೋ ಮೋಹನಾಂಗ
ರಂಗವಿಠಲನೆ ಜೋ ಜೋ || ೨೨ ||