ಲಂಬೋದರ ಲಕುಮಿಕರ

ರಚನೆಕಾರ: ಪುರಂದರದಾಸರು

ವರ್ಗ: ಗಣೇಶ

ಲಂಬೋದರ ಲಕುಮಿಕರ
ಅಂಬಾಸುತ ಅಮರ ವಿನುತ || ಪ ||

ಶ್ರೀ ಗಣನಾಥ ಸಿಂಧುರ ವರ್ಣ
ಕರುಣ ಸಾಗರ ಕರಿವದನ || ೧ ||

ಸಿದ್ಧ ಚಾರಣ ಗಣ ಸೇವಿತ
ಸಿದ್ಧಿ ವಿನಾಯಕ ತೇ ನಮೋ ನಮೋ || ೨ ||

ಸಕಲ ವಿದ್ಯಾ ಆದಿ ಪೂಜಿತ
ಸರ್ವೋತ್ತಮ ತೇ ನಮೋ ನಮೋ || ೩ ||